ಕೊಲತ್ತೂರು: ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನೀಡಿರುವ ಉದ್ಯೋಗ ಜಾಹೀರಾತಿನಲ್ಲಿ 'ಹಿಂದೂಗಳಿಗೆ ಮಾತ್ರ' ಎಂದು ಉಲ್ಲೇಖಿಸಿ ವಿವಾದಕ್ಕೆ ಗುರಿಯಾಗಿದೆ.
ಕೊಲತ್ತೂರಿನಲ್ಲಿರುವ ಅರುಳ್ಮಿಗ ಕಪಾಲೀಶ್ವರರ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿವಿಧ ಬೋಧನೆ ಮತ್ತು ಬೋಧಕೇತರ ಹುದ್ದೆಗಳಿಗೆ ಅಕ್ಟೋಬರ್ 13 ರಂದು ಅರ್ಜಿ ಆಹ್ವಾನಿಸಿ, ಜಾಹೀರಾತು ಪ್ರಕಟಿಸಿತ್ತು. ಜಾಹೀರಾತಿನಲ್ಲಿ ಈ ಹುದ್ದೆಗಳು 'ಹಿಂದುಗಳಿಗೆ ಮಾತ್ರ' ಎಂದು ಹೇಳಲಾಗಿದೆ. ಇದು ರಾಜ್ಯದಲ್ಲಿ ಭಾರಿ ಗದ್ದಲ ಸೃಷ್ಟಿಸಿದ್ದು, ಹಲವು ಸಂಘಟನೆಗಳು ಕಿಡಿಕಾರಿದೆ.
ಸರ್ಕಾರದಿಂದ ನಡೆಸಲ್ಪಡುವ ಇಲಾಖೆಯು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಮತ್ತು ಇತರ ಧರ್ಮದ ಅಭ್ಯರ್ಥಿಗಳನ್ನು ಅನರ್ಹರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಪಾಂಡ್ಯನ್ ಹೇಳಿದ್ದಾರೆ.
PublicNext
18/10/2021 04:47 pm