ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ದರ್ಶನಕ್ಕೆ ಬಂದಿದ್ದ ಸಾಧುವನ್ನು ಥಳಿಸಿದ ಮಠದ ಸಿಬ್ಬಂದಿ

ಕಲಬುರಗಿ: ದರ್ಶನ ಮಾಡಲು ಮಠಕ್ಕೆ ಬಂದಿದ್ದ ಸಾಧುವಿನ ಮೇಲೆ ಮಠದ ಸಿಬ್ಬಂದಿಯೇ ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ನಡೆದಿದೆ.

ಗ್ರಾಮದ ಮಾತಾ ಮಾಣಿಕೇಶ್ವರಿ ಮಠದಲ್ಲಿ ಸಾಧು ಪ್ರವೇಶ ಮಾಡ್ತಾ ಇದ್ದಂತೆ ಅವರ ಮೇಲೆ ಮಠದ ಸಿಬ್ಬಂದಿ ಎರಗಿದ್ದಾರೆ. ಕೂದಲು ಹಿಡಿದು ತಳ್ಳಾಡಿ ಹಲ್ಲೆ ನಡೆಸಿದ್ದಾರೆ. ಹಾಗೂ ಮಠದಿಂದ ಹೊರಕ್ಕೆ ನೂಕಿದ್ದಾರೆ. ಹಲ್ಲೆಗೊಳಗಾದ ಸಾಧು ಯಾರು? ಎಲ್ಲಿಯವರು ಎಂಬ ಮಾಹಿತಿ ತಿಳಿದು ಬಂದಿಲ್ಲ. ಹಲ್ಲೆ ಮಾಡುತ್ತಿರುವ ದೃಶ್ಯ ಈಗ ವೈರಲ್ ಆಗುತ್ತಿದೆ. ಮಠದ ಸಿಬ್ಬಂದಿಯ ಈ ದುರ್ನಡತೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Manjunath H D
PublicNext

PublicNext

18/10/2021 02:31 pm

Cinque Terre

65.05 K

Cinque Terre

5

ಸಂಬಂಧಿತ ಸುದ್ದಿ