ನವದೆಹಲಿ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧಿಸಿ, ನಂತರ ಜಾಮೀನು ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
ಕಳೆದ ವರ್ಷ ಇನ್ಸ್ಟಾ ಚಾಟ್ ವೇಳೆ ಯುವಿ, ಪರಿಶಿಷ್ಟ ಜಾತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಂಸಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ನಡೆದ ಲೈವ್ ಚಾಟ್ ವೇಳೆ ಯುವರಾಜ್ ಸಿಂಗ್ ಮಾತಾಡಿದ್ದಾರೆ. ಈ ವೇಳೆ ಯಜುವೇಂದ್ರ ಚಹಲ್ ಎಂಬುವವರ ಜಾತಿ ಹಿನ್ನಲೆ ಬಗ್ಗೆ ಕಾಲೆಳೆದಿದ್ದರು. ಹಾಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅಸಂವಿಧಾನಿಕ ಪದ ಬಳಕೆ ಮಾಡಿದ್ದರು ಎಂಬ ಆರೋಪ ಯುವರಾಜ್ ಸಿಂಗ್ ಮೇಲಿದೆ.
PublicNext
18/10/2021 08:33 am