ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ ಪೊಲೀಸರ ಸಾಹಸಿಕ ಕಾರ್ಯಾಚರಣೆ: ಮೂವರು ಅಂತಾರಾಜ್ಯ ದರೋಡೆಕೋರರ ಸೆರೆ

ಚಿಕ್ಕೋಡಿ: ಚಿಕ್ಕೋಡಿ ಪೊಲೀಸರು ಸಾಹಸಮಯ ಕಾರ್ಯಾಚರಣೆಯೊಂದರಲ್ಲಿ ಅಂತಾರಾಜ್ಯ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ. ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್ ಸ್ಟರ್ ಶೇರ್ ಖಾನ್ ನ ಅನುಯಾಯಿಗಳಾದ ಹರಿಯಾಣದ ಅಬಿದ್ , ರಾಜಸ್ಥಾನದ ಅಶ್ವಿನ್ ಜೈನ್, ಉತ್ತರಪ್ರದೇಶದ ರಿಜ್ವಾನ್ ಬಂಧಿತರಾಗಿದ್ದು, ಅವರಿಂದ 30 ಲಕ್ಷ ಮೌಲ್ಯದ ಸಿಯಟ್ ಕಂಪನಿ ಟಯರ್ ಗಳು, 17 ಲಕ್ಷ ಮೌಲ್ಯದ ವಿವಿಧ ಕಂಪನಿಯ ಬಿಸ್ಕಿಟ್ ಗಳು ಹಾಗೂ 20 ಲಕ್ಷ ಮೌಲ್ಯದ ಒಂದು ಕಂಟೇನರ್ ಗಾಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಅಂತಾರಾಜ್ಯ ದರೋಡೆಕೋರರ ಬಂಧನಕ್ಕೆ ಕಾರ್ಯಾಚರಣೆಗೆ ಬೆಳಗಾವಿ ಎಸ್ಪಿ, ಹೆಚ್ಚುವರಿ ಎಸ್ಪಿ, ಚಿಕ್ಕೋಡಿ ಡಿಎಸ್ಪಿ ಮಾರ್ಗದರ್ಶನ ನೀಡಿದ್ದು, ಸಿಪಿಐ ಆರ್. ಆರ್. ಪಾಟೀಲ್, ಪಿಎಸ್ ಐ ಯಮನಪ್ಪ ಮಾಂಗ ಚಿಕ್ಕೋಡಿ ನೇತೃತ್ವ ವಹಿಸಿದ್ದರು. ಎಎಸ್ ಐ ಎಲ್. ಎಸ್. ಖೋತ, ಕಾನ್ ಸ್ಟೇಬಲ್ ಗಳಾದ ಗಜಾನನ ಕಾಂಬಳೆ, ಮಂಜು ಸತ್ತಿಗೆರಿ, ಸಿದ್ದು ಗಲಗಲಿ, ಭರತ ಲಕ್ಕನವರ, ನಿತೀನ್ ಬಡಿಗೇರ, ಆರ್. ಆರ್. ಗಿಡ್ಡಪ್ಪಗೊಳ ಭಾಗವಹಿಸಿದ್ದರು.

Edited By : Nirmala Aralikatti
PublicNext

PublicNext

17/10/2021 11:48 am

Cinque Terre

42.36 K

Cinque Terre

1