ಶ್ರೀನಗರ: ಕಣಿವೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಅನೇಕ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ ಬೆನ್ನಲ್ಲೆ ಇಂದು ಶ್ರೀನಗರದಲ್ಲಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದಾರೆ. ಶ್ರೀನಗರದಲ್ಲಿಂದು ಸ್ಥಳೀಯನಲ್ಲದ ಬೀದಿ ಬದಿ ವ್ಯಾಪಾರಿಯನ್ನು ಭಯೋತ್ಪಾದಕರು ಪಾಯಿಂಟ್-ಬ್ಲಾಂಕ್ ನಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಸ್ಥಳೀಯರಲ್ಲದ ಮಾರಾಟಗಾರ ಅರಬಿಂದ್ ಕುಮಾರ್ ಸಾಹ್ ಅನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ ಎಂದು ಕಾಶ್ಮೀರ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದರು.
ಮೃತರು ಗೋಲ್ ಗಪ್ಪಾ ಮಾರಾಟಗಾರರಾಗಿದ್ದು, ಬಿಹಾರದ ಬಂಕಾದಿಂದ ಬಂದಿದ್ದರು ಎಂದು ಗುರುತಿಸಲಾಗಿದೆ. ಈ ಕುರಿತು
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಇಂದು ಶ್ರೀನಗರದಲ್ಲಿ ನಡೆದ ಭೀಕರ ದಾಳಿಯಲ್ಲಿ ಬೀದಿ ಬದಿ ವ್ಯಾಪಾರಿ ಅರಬಿಂದ್ ಕುಮಾರ್ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ನಾಗರಿಕರನ್ನು ಈ ರೀತಿ ಗುರಿಯಾಗಿಸಿಕೊಂಡ ಇನ್ನೊಂದು ಪ್ರಕರಣವಾಗಿದೆ. ದುಡಿಮೆಗಾಗಿ ಶ್ರೀನಗರಕ್ಕೆ ಬಂದಿದ್ದ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
PublicNext
16/10/2021 10:43 pm