ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ ಗಡಿಭಾಗದಲ್ಲಿದೆ ಬಡಿದಾಟದ ಹಬ್ಬ: ಮೌಢ್ಯತೆಗಾಗಿ ಹರಿಯುತ್ತೆ ನೆತ್ತರು

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಏನಿದು ಅಮಾನವೀಯ ವಿಚಿತ್ರ ಆಚರಣೆ ಎಂಬ ಪ್ರಶ್ನೆ ಈ ಸುದ್ದಿ ನೋಡಿದ ನಿಮಗೆ ಅನಿಸದೇ ಇರದು. ಆಂಧ್ರದ ಕರ್ನೂಲ್ ಜಿಲ್ಲೆಯ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಪರಸ್ಪರ ಬಡಿಗೆಯಿಂದ ಬಡಿದಾಡಿಕೊಳ್ಳುವ ಆಚರಣೆ ಇದೆ. ದಶಕಗಳಿಂದಲೂ ನಡೆದ ಈ ಜಾತ್ರೆಗೆ ಇದೀಗ ಕೊರೋನಾ ಹಿನ್ನಲೆ ನಿಷೇಧ ಹೇರಿದ್ರು ಆಚರಣೆ ನಡೆದಿದೆ. ಪೊಲೀಸರು ಬಂದು ಆಚರಣೆ ನಿಲ್ಲಿಸುವಂತೆ ಮನವಿ ಮಾಡಿದ್ರೂ ಜನ ಮಾತ್ರ ಪೊಲಿಸರ ಮಾತಿಗೆ ಕೇರ್ ಮಾಡೋದೇ ಇಲ್ಲ.

ದೇವರ ಮೂರ್ತಿಗಾಗಿ ನಾಲ್ಕು ಹಳ್ಳಿಗಳ ಜನ ಕೋಲಿನಿಂದ ಪ್ರಾಣ ಹೋಗುವಂತೆ ಬಡಿದಾಡಿಕೊಳ್ಳುತ್ತಾರೆ. ಈ ಸಲದ ಆಚರಣೆಯಲ್ಲಿ 80ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ ಹಾಗೂ ನಾಲ್ಕು ಜನ ಸಾವನ್ನಪ್ಪಿರುವ ಮಾಹಿತಿ ಇದೆ.ರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವದವರೆಗೂ ಬಡಿದಾಟ ನಡೆಯುತ್ತೆ. ಯಾರು ತಮ್ಮ ಊರಿಗೆ ದೇವರು ಕರೆದುಕೊಂಡು ಹೋಗ್ತಾರೋ ಆ ಊರಿಗೆ ಒಳ್ಳೇದಾಗುತ್ತೆ ಎನ್ನುವ ವಿಚಿತ್ರ ಮೂಢನಂಬಿಕೆ ಈ ಜನರಲ್ಲಿದೆ.

Edited By : Manjunath H D
PublicNext

PublicNext

16/10/2021 04:33 pm

Cinque Terre

67.71 K

Cinque Terre

10

ಸಂಬಂಧಿತ ಸುದ್ದಿ