ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸಿದ್ದ ಉಪನ್ಯಾಸಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಅಲಿಯಾಸ್ ನಾಗರಾಜ್ ಬಂಧಿತ ಅರೋಪಿ. ಮೈಸೂರಿನ ಖಾಸಗಿ ಕಾಲೇಜೊಂದರ ಲೆಕ್ಚರರ್ ಆಗಿರುವ ಸುರೇಶ್ ಮೈಸೂರ್ ನ ಡಿಟಿಪಿ ಸೆಂಟರ್ ಒಂದರಲ್ಲಿ ಟೈಪಿಸ್ಟ್ ಕೆಲಸ ಮಾಡ್ತಿದ್ದ ಯುವತಿಗೆ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಕೊಡಿಸುತ್ತೆನೆ ಎಂದಿದ್ದ. ಅದೇ ಡಿಟಿಪಿ ಸೆಂಟರ್‌ಗೆ ಸುರೇಶ್ ಲೆಟರ್ ಒಂದನ್ನ ಟೈಪ್ ಮಾಡಿಸಲು ತೆರಳಿದ ಸಂದರ್ಭದಲ್ಲಿ ಯುವತಿ ತನಗೆ ಎಲ್ಲಾದ್ರು ಒಂದು ಕೆಲಸ ಇದ್ರೆ ಹೇಳಿ ಸರ್ ಎಂದು ಮನವಿ ಮಾಡಿದ್ದಾಳೆ. ಎಲ್ಲಾದ್ರು ಯಾಕೆ ಸರ್ಕಾರಿ ಕೆಲಸ ಕೊಡಿಸೋಣ ಎಂದ ಈತ ಆಕೆಯಿಂದ ೬ ಲಕ್ಷ ಹಣ ಪಡೆದುಕೊಂಡಿದ್ದ.
ಬಳಿಕ ಬೇರೊಂದು ಡಿಟಿಪಿ ಸೆಂಟರ್ ನಲ್ಲಿ ಸರ್ಕಾರದ ಲೆಟರ್ ಹೆಡ್ ನಂತೆ ಲೆಟರ್ ಟೈಪ್ ಮಾಡಿಸಿ ಯುವತಿಗೆ ಮಹಾರಾಣಿ ಕಾಲೇಜಿನಲ್ಲಿ ಎಫ್ ಡಿ ಎ ಎಂದು ಆಫರ್ ಲೆಟರ್ ಕೊಟ್ಟಿದ್ದಾನೆ. ಆಫರ್ ಲೆಟರ್ ಸಹಿತ ವಿಧಾನ ಸೌಧದ ಎಂ ಎಸ್ ಬಿಲ್ಡಿಂಗ್ ನ ಶಿಕ್ಷಣ ಇಲಾಖೆಗೆ ದಾಖಲೆ ಪರಿಶೀಲನೆಗೆಂದು ಬಂದಾಗ ಸತ್ಯ ಬಯಲಾಗಿದೆ. ನಂತರ ಇಲಾಖೆಯಿಂದಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಸದ್ಯ ವಿಧಾನ ಸೌಧ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.
PublicNext
15/10/2021 01:05 pm