ಚಿತ್ರದುರ್ಗ : ಎಟಿಎಂ ಚಸ್ಟ್ ವಾಹನದ ಭದ್ರಾತಾ ಸಿಬ್ಬಂದಿಯೊಬ್ಬರು ವಾಹನಗಳಿಗೆ ಹಾಗೂ ಅಲ್ಲಿನ ಸಲಕರಣೆಗಳಿಗೆ ಆಯುಧ ಪೂಜೆಯನ್ನು ನಡೆಸಿ ನಂತರ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಾಸಲು ಬಳಿ ಇರುವ ಭೂತಪ್ಪನ ದೆವಸ್ಥಾನದ ಸಮೀಪ ಎಟಿಎಂ ಮಿಷನ್ ಗಳಿಗೆ ಹಣ ಪೂರೈಸುವ ವಾಹನಗಳಿಗೆ ಹಾಗೂ ಅದರ ಮ್ಯಾಕಾನಿಕ್ ಟೂಲ್ ಗಳಿಗೂ ಭದ್ರತಾ ಸಿಬ್ಬಂದಿಗಳು ಪೂಜೆ ನೆರವೇರಿಸಿದರು. ಸಿಬ್ಬಂದಿಗೆ ನೀಡಲಾಗಿದ್ದ ಗನ್ ತೆಗೆದುಕೊಂಡು ವಾಹನ ಭದ್ರತಾ ಸಿಬ್ಬಂದಿಯೊಬ್ಬರು ತಾವು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿರುವುದು ಅಕ್ರಮವಾಗುತ್ತದೆಂದು ಸ್ಥಳದಲ್ಲಿದ್ದರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭದ್ರತಾ ಸಿಬ್ಬಂದಿ ತಾನು ಮಾಜಿ ಯೋಧ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಈ ಘಟನೆಯ ಕುರಿತು ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಪೋಲಿಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ರಮೇಶ್ ಎಂಬುವವರು ದೂರು ದಾಖಲಿಸಿದ್ದು, ಎಟಿಎಂ ವಾಹನ ಭದ್ರತಾ ಸಿಬ್ಬಂದಿ ಮಲ್ಲಿಕಾರ್ಜುನಯ್ಯ ಹಾಗೂ ಜನಾರ್ಧನ ಎಂಬ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
PublicNext
15/10/2021 08:22 am