ಕೊಪ್ಪಳ: ಯುವಕನೋರ್ವ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆ ಮಹಿಳೆ ಚಪ್ಪಲಿಯಿಂದ ಥಳಿಸಿದ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಇನ್ನು ಮಹಿಳೆ ಯುವಕನಿಗೆ ಚಪ್ಪಲಿ ಸೇವೆ ಮಾಡುತ್ತಿದ್ದಂತೆ ಅಲ್ಲಿಯೇ ಇದ್ದ ಗ್ರಾಮಸ್ಥರು ಯುವಕನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಇನ್ನು ಈ ರೀತಿ ಧರ್ಮದೇಟು ತಿಂದವನನ್ನು ಉಳೇನೂರು ಗ್ರಾಮದ ವ್ಯಕ್ತಿ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿದ್ದ ಈತ ಸಂತೆಯಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿ ಗ್ರಾಮಸ್ಥರಿಂದ ಹಿಗ್ಗಾ-ಮುಗ್ಗ ಒದೆ ತಿಂದಿದ್ದಾನೆ.
PublicNext
12/10/2021 07:53 pm