ಬೆಂಗಳೂರೂ: ಮನೆ ಬೀಗ ಹಾಕಿ ಕೀ ಮನೆ ಆಸು-ಪಾಸು ಬಚ್ಚಿ ಇಟ್ಟೀರಾ ಜೋಕೆ. ಎಲ್ಲಲ್ಲೂ ಕಳ್ಳರಿದ್ದಾರೆ ಎಚ್ಚರ ಎಚ್ಚರ.
ಹೌದು ಈ ಥರ ಎಚ್ಚರಿಕೆ ನೀಡೋ ಕಳ್ಳತನದ ಘಟನೆಯೊಂದು ಬೆಂಗಳೂರು ವಿಜಯನಗರದ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರದಲ್ಲಿ ಮಹಿಳೆಯೊಬ್ಬರು ಪ್ರತಿ ದಿನ ಯೋಗ ಮಾಡೋಕೆ ಮನೆ ಬೀಗ ಹಾಕಿ ಹೋಗುತ್ತಿದ್ದರು. ಹೋಗುವಾಗ ಅಲ್ಲಿಯೇ ಆವರಣದಲ್ಲಿದ್ದ ಹೂವಿನ ಕುಂಡದಲ್ಲಿ ಮನೆ ಬೀಗದ ಕೈ ಇಟ್ಟುಹೋಗುತ್ತಿದ್ದರು. ಇದನ್ನ ದಿನವೂ ಗಮನಿಸಿದ ಕಳ್ಳ, ಒಂದು ದಿನ ಪ್ಲಾನ್ ಮಾಡಿ ಇಡೀ ಮನೆಯನ್ನೇ ದೋಚಿಕೊಂಡು ಹೋಗಿದ್ದಾನೆ.
ಸೆಪ್ಟೆಂಬರ್-10 ರಂದು ಕಳ್ಳ ಸಲೀಸ ಆಗಿಯೇ ಮನೆಯ ಬೀಗದ ಕೈ ತೆಗೆದುಕೊಂಡಿದ್ದಾನೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಹಣ ಕದ್ದುಕೊಂಡು ಹೋಗಿದ್ದಾನೆ. ಆದರೆ, ತಕ್ಷಣವೇ ಮನೆಯವ್ರು ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು.ಒಂದು ತಿಂಗಳು ಬಳಿಕ ಆ ಕಳ್ಳ ಪೊಲೀಸರಿಗೆ ಸಿಕ್ಕಿದ್ದಾನೆ. 10 ಲಕ್ಷ ಮೌಲ್ಯದ 960 ಗ್ರಾಮ ಚಿನ್ನಾಭರಣವನ್ನ ಪೊಲೀಸರು ಕಳ್ಳನಿಂದ ವಶಪಡಿಸಿಕೊಂಡಿದ್ದಾರೆ.
PublicNext
12/10/2021 06:56 pm