ಲಕ್ನೋ:ಮಗನ ಸಾವಿನಿಂದ ಮನನೊಂದ ಮಾವ ಸೊಸೆಯ ಕೊಲೆಗೈದು ಮೊಮ್ಮಗಳನ್ನ ಅನಾಥವಾಗಿಸಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಸೊಸೆಯನ್ನ ಕೊಂಡ ಮಾವನ ಹೆಸರು ರಾಮ್ ಕಿಶನ್ ಬನ್ಸಾಲ್.ಪುತ್ರನ ಹೆಸರು ಅಮಿತ್ ಬನ್ಸಾಲ್. ಒಳಾಂಗಣ ವಿನ್ಯಾಸಕಾರನಾಗಿ ಕೆಲಸ ಮಾಡುತ್ತಿದ್ದ. ಗಾಜಿಯಾಬಾದ್ ಮೂಲದ ಪಿಂಕಿ ಹೆಸರಿನ ಹುಡ್ಗಿಯನ್ನ ಮದುವೆನೂ ಆಗಿದ್ದ.
ಅದೇನ್ ಆಗಿತ್ತೋ ಏನೋ. ತನ್ನ ಕಚೇರಿಯಲ್ಲಿಯೇ ಅಮಿತ್ ಆತ್ಮಹತ್ಯೆ ಮಾಡಿಕೊಂಡಿದ್ದ,ಪತಿ ತನ್ನ ಫೋನ್ ತೆಗೆದುಕೊಳ್ಳುತ್ತಿಲ್ಲ ಅಂತ ಅನುಮಾನ ಬಂದು ಕಚೇರಿಗೆ ಬಂದಾಗಲೇ ಪಿಂಕಿಗೆ ಪತಿಯ ಆತ್ಮಹತ್ಯೆ ವಿಷಯ ತಿಳಿದಿದೆ. ಸೊಸೆ ಹಿಂದೇನೆ ಬಂದಿದ್ದ ಮಾವ ರಾಮ್ ಕಿಶನ್, ಮಗನ ಸಾವನ್ನ ಕಂಡು ಸಿಟ್ಟಿಗೆದ್ದಿದ್ದಾರೆ. ಅಲ್ಲಿಯೇ ಇದ್ದ ಕಟ್ಟರ್ ನಿಂದಲೇ ಸೊಸೆ ಕತ್ತು ಸೀಳಿ ಕೊಲೆ ಮಾಡಿದ್ದಾರೆ.ದುರಂತ ಅಂದ್ರೆ,ಸೊಸೆ ಕೊಂದು ಮಾವ ಜೈಲ್ ಸೇರಿದ್ದಾನೆ.ಮೃತರ 8 ವರ್ಷದ ಪುತ್ರಿ ಈಗ ಅನಾಥವಾಗಿದ್ದಾಳೆ.
PublicNext
12/10/2021 01:58 pm