ಅಲ್ಲಿ ಇಲ್ಲಿ ಎಲ್ಲೆಡೆ ಈಗ ಬಿಗ್ ಬಿಲಿಯನ್ ಡೇ ಅಬ್ಬರ. ಈ ಅಬ್ಬರದಲ್ಲಿ ಆಫರ್ ಗಳ ಸುರಿಮಳೆನೂ ಆಗುತ್ತಿದೆ. ಜನ ಮುಗಿಬಿದ್ದು ವಸ್ತುಗಳನ್ನ ಖರೀದಿಸುತ್ತಿದ್ದಾರೆ. ದುಬಾರಿ ಐಫೋನ್ ಖರೀದಿಸೋರ ಸಂಖ್ಯೆನೂ ಹಚ್ಚಿದೆ. ಆದರೆ, ಇಲ್ಲೊಬ್ಬ ಇದೇ ಬಿಗ್ ಬಿಲಯನ್ ಡೇ ಅಲ್ಲಿ Filpkart ಮೂಲಕ ಐಫೋನ್-12 ಬುಕ್ ಮಾಡಿದ್ದಾನೆ. ಮುಂದೆ ಆಗಿದ್ದೇನೂ ಗೊತ್ತ ? ಹೇಳ್ತೀವಿ ಓದಿ.
ಐಫೋನ್-12 ತೆಗೆದುಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ದುಡ್ಡು ಇರೋರು ಅಷ್ಟೆ. ಇಲ್ಲದೇ ಇರೋರು ಅಷ್ಟೆ. ಒಮ್ಮೆ ಐಫೋನ್ ಖರೀದಿಸಬೇಕು ಅಂತ ಆಸೆಪಡ್ತಾರೆ. ಇಲ್ಲೊಬ್ಬ ಅದೇ ರೀತಿನೇ ಹಬ್ಬದ ಆಫರ್ ಗದ್ದಲದಲ್ಲಿಯೇ Filpkart
ಮೂಲಕ 51,999 ಬೆಲೆಯ ಐಫೋನ್-12 ಬುಕ್ ಮಾಡಿದ್ದಾರೆ. ಆ ವ್ಯಕ್ತಿನೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿರೋವಂತೆ, ಐಫೋನ್ ಅನ್‌ಬಾಕ್ಸ್ ಮಾಡೋ ಮುಂಚೇನೆ ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮಾಡಿದೆ. ಆದರೆ ಐಫೋನ್ ಬದಲು ಎರಡು ಸೋಪ್ ಐಫೋನ್ ಬಾಕ್ಸ್ ಅಲ್ಲಿ ಇದ್ದವು. ಕೂಡಲೇ ಆರ್ಡರ್ ಕ್ಯಾನ್ಸಲ್ ಮಾಡಿದೆ. ದುಡ್ಡು ಮರುಪಾವತಿ ಆಗುತ್ತಿದೆ ಅಂತಲೇ ಹೇಳಿಕೊಂಡಿದ್ದಾರೆ.
PublicNext
12/10/2021 01:03 pm