ಅಫ್ಘಾನಿಸ್ತಾನ: ಬಲವಂತವಾಗಿಯೇ ತಾಲಿಬಾನಿಗಳು ಇಲ್ಲಿಯ ಮಾದಕ ವ್ಯಸನಿಗಳನ್ನ ಹಿಡಿದು ತಂದು ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದಾರೆ. ಆದರೆ, ಅಲ್ಲಿ ಅವರೊಟ್ಟಿಗೆ ನಡೆದುಕೊಳ್ತಿರೋ ರೀತಿ ತುಂಬಾ ಕ್ರೂರವಾಗಿದೆ. ಅಲ್ಲಿಯ ಆ ಸಂದರ್ಭದ ಫೋಟೋಗಳು ಸಿಕ್ಕಾಪಟ್ಟೆ ಈಗ ಚರ್ಚೆ ಆಗುತ್ತಿವೆ.
ತಾಲಿಬಾನ್ ನಲ್ಲಿ ತಾಲಿಬಾನಿಗಳ ಶಿಕ್ಷೆಯ ಪರಿನೇ ಕ್ರೂರವಾಗಿದೆ. ಇವರ ಕೈಗೆ ಸಿಕ್ಕಿಬಿದ್ದ ಮಾದಕ ವ್ಯಸನಿಗಳ ಗತಿಯಂತೂ ಈಗ ಹೇಳತೀರದು. ಅದನ್ನ ಕಂಡ್ರೆ ಎಂತವರಿಗೂ ನಡುಕ ಹುಟ್ಟುತ್ತದೆ. ಹಾಗಿದೆ ಅಲ್ಲಿ ವ್ಯಸನಿಗಳ ಸ್ಥಿತಿ. ಹೆಚ್ಚು ಕಡಿಮೆ 150 ಮಾದಕ ವ್ಯಸನಿಗಳನ್ನ ತಾಲಿಬಾನಿಗಳು ಹಿಡಿದು ತಂದಿದ್ದಾರೆ .ಪುನರ್ವಸತಿ ಹೆಸರಲ್ಲಿ ಅವರಿಗೆ ಹೊಡೆಯಲಾಗುತ್ತಿದೆ. ತಲೆಬೋಳಿಸೋ ಕ್ರೂರ ಶಿಕ್ಷೆನೂ ಕೊಡಲಾಗುತ್ತಿದೆ. ನಿಜಕ್ಕೂ ಆ ದೃಶ್ಯ ಕರಳು ಹಿಂಡುವಂತಿದೆ.ಆದರೆ ಈ ಕ್ರೌರ್ಯ ಪ್ರಶ್ನಿಸೋರು ಯಾರು ?
PublicNext
11/10/2021 08:01 pm