ಮುಂಬೈ: ಉತ್ತರ ಪ್ರದೇಶದ ಲಿಖಿಂಪುರ ಖೇರಿ ಘಟನೆ ಖಂಡಿಸಿ ಮಹಾರಾಷ್ಟ್ರ ವಿಕಾಸ್ ಅಘಾಡಿ ಬಂದ್ ಗೆ ಕರೆ ನೀಡಿತ್ತು. ಈ ವೇಳೆ ಥಾಣೆಯಲ್ಲಿ ಶಿವಸೇನೆ ಕಾರ್ಯಕರ್ತರು ಒತ್ತಾಯವಾಗಿ ಬಂದ್ ಮಾಡಿಸಲು ಮುಂದಾಗಿದ್ದಾರೆ. ಬಂದ್ ಗೆ ಸಹಕರಿಸದೇ ಎಂದಿನಂತೆ ಆಟೋ ರಿಕ್ಷಾ ಓಡಿಸುತ್ತಿದ್ದ ಚಾಲಕರ ಮೇಲೆ ಕಟ್ಟಿಗೆಯಿಂದ ಶಿವಸೇನೆ ಕಾರ್ಯಕರ್ತನೊಬ್ಬ ಹಲ್ಲೆ ಮಾಡಿದ್ದಾನೆ.
ಈ ವೇಳೆ ಇತರ ಕಾರ್ಯಕರ್ತರು ಆತನ ಬೆಂಬಲಕ್ಕೆ ನಿಂತಿದ್ದಾರೆ. ಈ ಮೂಲಕ ಆ ರಸ್ತೆಯಲ್ಲಿ ಬಂದ ಆಟೋ ಚಾಲಕರನ್ನು ಹಲ್ಲೆ ಮಾಡಿ ಗೂಂಡಾಗಿರಿ ಮೆರೆದಿದ್ದಾರೆ. ಇಷ್ಟೇ ಅಲ್ಲ. ಅಂಗಡಿ-ಮುಂಗಟ್ಟುಗಳನ್ನು ಮುಚ್ಚದ ವ್ಯಾಪಾರಿಗಳಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
PublicNext
11/10/2021 04:42 pm