ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಬಡ್ಡಿಸಾಲ ದಂಧೆಕೋರರ ಕಿರುಕುಳ; ಕ್ವಾರಿಯಲ್ಲಿ ಶವವಾದ ಯುವಕ

ಬಾಗಲಕೋಟೆಯಲ್ಲಿ ಬಡ್ಡಿಸಾಲ ದಂದೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಸಾಲಗಾರರ ಕಾಟ ತಡೆಯಲಾಗದೆ ಯುವಕನೋರ್ವ ಬಾಗಲಕೋಟೆ ನಗರದಲ್ಲಿರುವ ಸಿಮೆಂಟ್ ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಗರದ ಆಲಮಟ್ಟಿ ಜಲಾಶಯದ ಹಿನ್ನೀರು ಸಂಗ್ರಹ ಇರುವ ಸಿಮೆಂಟ್ ಕ್ವಾರಿ ಇದಾಗಿದ್ದು.ಮೂರು ದಿನದ ಹಿಂದೆಯೇ ನಾಪತ್ತೆಯಾಗಿದ್ದ ಈತ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಅಕ್ಷಯ್ ಚಿನ್ನಾಕಾರ(26)ಮೃತ ಯುವಕ .ಈತ ಸೆಲೂನ್ ನಡೆಸಲೆಂದು ಹತ್ತು ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ , ಒಂದು ವಾರದಿಂದ ಸಾಲ ಕೊಟ್ಟವರ ಕಾಟ ತೀರಾ ಹೆಚ್ಚಾಗಿತ್ತು..ದಿನಾಲು ಸಾಲ ಮರಳಿ ಕೊಡುವಂತೆ ಕಾಟ ಕೊಡುತ್ತಿದ್ದರು..ಇದರಿಂದ ನೊಂದು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಾರಕ್ಕೆ ನೂರಕ್ಕೆ ಹತ್ತು ರೂ ನಂತೆ ಬಡ್ಡಿ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅಸಲು ಬಡ್ಡಿ ತೀರಿಸಲಾಗದೆ ಮನನೊಂದ ಯುವಕ ಈ ರೀತಿ ಅಂತ್ಯಕಂಡಿದ್ದಾನೆ.ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Edited By : Shivu K
PublicNext

PublicNext

11/10/2021 11:02 am

Cinque Terre

64.7 K

Cinque Terre

10