ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದ ಫೋಟೋ ಸ್ಟುಡಿಯೋ ಭಸ್ಮ

ಶಾರ್ಟ್ ಸರ್ಕ್ಯೂಟ್ ನಿಂದ ಫೋಟೋ ಸ್ಟುಡಿಯೋ ಬೆಂಕಿ ಬಿದ್ದಿರೋ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ.

ನಗರದ ವಾರ್ಡ್ ನಂಬರ್ 03ರ ಡೋಣ್ಣೆಗೆರಾ ಓಣಿಯಲ್ಲಿರೋ ರೇಣುಕಾ ಫೋಟೋ ಸ್ಟುಡಿಯೋಗೆ ಮಧ್ಯರಾತ್ರಿ 2 ಗಂಟೆಗೆ ಬೆಂಕಿ ಬಿದ್ದ ಪರಿಣಾಮ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಇನ್ನು ಸುಭಾಸ್ ಹುಲಕಲ್ ಅವರಿಗೆ ಸೇರಿದ ರೇಣುಕಾ ಡಿಜಿಟಲ್ ಫೋಟೋ ಸ್ಟುಡಿಯೋದಲ್ಲಿದ್ದ ಕಂಪ್ಯೂಟರ್,ಕ್ಯಾಮೆರಾ ಪ್ರಿಂಟರ್, ಜೆರಾಕ್ಸ್ ಮಷಿನ್ ಸೇರಿದಂತೆ ಇನ್ನಿತರ ವಸ್ತುಗಳು ಭಸ್ಮಗೊಂಡಿವೆ.

ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

10/10/2021 12:45 pm

Cinque Terre

74.61 K

Cinque Terre

0