ಪುರಿ(ಒಡಿಶಾ):ಇಲ್ಲಿನ ಪ್ರಸಿದ್ದ ಪುರಿ ಜಗನ್ನಾಥ ದೇವಾಲಯದ ಆವರಣದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ದೇವಾಲಯದ ಅರ್ಚಕರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
12ನೇ ಶತಮಾನದ ದೇಗುಲದ ಆವರಣದಲ್ಲಿರುವ ಸಣ್ಣ ದೇವಸ್ಥಾನದಲ್ಲಿ ಹೈದರಾಬಾದ್ ಮೂಲದ ಹುಡುಗಿ ನಮಸ್ಕರಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಕೆಯ ಪೋಷಕರು ಮುಖ್ಯ ದೇವಸ್ಥಾನದಲ್ಲಿದ್ದರು. ಆಗ ಬಾಲಕಿ ಬಮನ ದೇವಸ್ಥಾನದಲ್ಲಿ ಒಬ್ಬಳೇ ಇದ್ದಾಗ ಅರ್ಚಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶ್ರೀ ಜಗನ್ನಾಥ ದೇವಾಲಯದ ಆವರಣದಲ್ಲಿ 136 ಸಣ್ಣ ದೇವಾಲಯಗಳಿವೆ. ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದೆ.
PublicNext
10/10/2021 07:42 am