ಬೆಂಗಳೂರು: ಕಳ್ಳ ಪ್ರೇಮಿಗಳಿಬ್ಬರು ಈಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಬಲೆಗೆ ಬಿದ್ದ ಪ್ರೇಮಿಗಳ ಕಥೆ ವೆರಿ ವೆರಿ ಇಂಟ್ರಸ್ಟಿಂಗ್ ಆಗಿದೆ.ಕಳ್ಳ ಪ್ರೇಯಸಿ ಗೋಲ್ಡ್ ಗಿಫ್ಟ್ ಕೇಳ್ತಾನೆ. ಆಕೆ ಆಸೆ ಪೂರೈಸಲು ರೌಡಿಶೀಟರ್ ಇದ್ದ ಪ್ರೇಮಿ ಕಳ್ಳನಾಗುತ್ತಾನೆ.
ರೌಡಿಶೀಟರ್ ಹೆಸರು ವಿನಯ್. ಹುಡ್ಗಿ ಹೆಸರು ಕೀರ್ತನಾ. ಇವರ ಲವ್ಲಿ ಜೋಡಿಗೆ ಸಾಟಿ ಇಲ್ಲ.ಆದರೆ ಅತಿ ಆಸೆ ಇಬ್ಬರನ್ನೂ ಕಳ್ಳತನ ಮಾಡೋ ಹಾಗೆ ಮಾಡಿದೆ, ಕೀರ್ತನಾ ಗೋಲ್ಡ್ ಗಿಫ್ಟ್ ಮಾಡು ಅಂದ್ಲಂತೆ. ವಿನಯ್ ನಾನು ಕಳ್ಳನೇ ನಾನು ರೌಡಿಶೀಟರ್ ಅಂದ್ನಂತೆ.ಆಗ ನೀನು ಕಳ್ಳನಾದರೂ ನಿನ್ನೇ ಪ್ರೀತಿಸುವೆ ಅಂದ್ಲಂತೆ ಕೀರ್ತನಾ.
ಪರಸ್ಪರ ಕಿಚಾಯಿಸಿಕೊಂಡಿದ್ದ ಈ ಜೋಡಿ ನಿಜಕ್ಕೂ ಕಳ್ಳತನಕ್ಕೆ ಕೈಹಾಕಿದೆ. ಮನೆ ಬಾಡಿಗೆ ಪಡೆಯೋ ಗಂಡ-ಹೆಂಡತಿ ಥರ ಬಂದು ಮನೆ ಬಾಡಿಗೆ ಕೇಳೋದು,ಮಾಲೀಕರ ಗಮನ ಬೇರೆಡೆ ಸೆಳೆದು ವಸ್ತುಗಳನ್ನ ದೋಚುವುದು ಇದೇ ಇವರ ಕೆಲಸ. ಮೊನ್ನೆ ಅಕ್ಟೋಬರ್-೦4 ರಂದು ಬೆಂಗಳೂರಿನ ಮಾರುತಿನಗರದ ಕುಲಶೇಖರ್ ಎಂಬುವವರ ಮನೆಗೆ ಬಂದು ಬಾಡಿಗೆ ಕೇಳೋ ನೆಪದಲ್ಲಿ ಮನೆಯಲ್ಲಿದ್ದ ಲ್ಯಾಪ್ ಟಾಪ್,ಮೊಬೈಲ್,15 ಸಾವಿರ ದುಡ್ಡು ದೋಚಿಕೊಂಡು ಹೋಗಿದ್ದಾರೆ. ಮನೆ ಮಾಲೀಕರ ದೂರಿನನ್ವಯ ಚಂದ್ರಾಲೇಔಟ್ ನ ಪೊಲೀಸರು ಈ ಕಳ್ಳ ಪ್ರೇಮಿಗಳನ್ನ ಅರೆಸ್ಟ್ ಮಾಡಿದ್ದಾರೆ.
PublicNext
08/10/2021 02:00 pm