ಮುಂಬೈ: ಮುಂಬೈ ವಿಮಾನ ನಿಲ್ದಾಣ ಎಂದೂ ಮಾರುಕಟ್ಟೆ ರೀತಿ ಇರೋದಿಲ್ಲ. ಜನದಟ್ಟಣೆಯಿಂದ ಅದು ಸಂತೆ ಹಾಗೇನೂ ಕಾಣೋದಿಲ್ಲ. ಆದರೆ ಇವತ್ತು ಮುಂಬೈ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಒಬ್ಬರಿಗೊಬ್ಬರು ಉಸಿರು ಬಡೆಯೋವಷ್ಟು ಜನ ಇಲ್ಲಿದ್ದರು.ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಇನ್ನಿಲ್ಲದಂತಹ ಆಕ್ರೊಶ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗೆ ಮುಂಬೈ ವಿಮಾನ ನಿಲ್ದಾಣ ಸಂತೆ ಆಗಿ ಹೋಗಿತ್ತು. ಎಲ್ಲಿ ನೋಡಿದ್ರೂ ಜನವೋ ಜನ.ಈ ದಟ್ಟಣೆಗೆ ಜನ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.ಅಲ್ಲಿಯ ಸ್ಥಿತಿಯನ್ನ ಚಿತ್ರಿಸಿ ವಿಮಾನ ನಿಲ್ದಾಣದ ಅವ್ಯವಸ್ಥೆಯನ್ನೂ ಬಿಂಬಿಸಿದ್ದಾರೆ. ಇದಕ್ಕೆ ಕಾರಣ ಹಬ್ಬದ ಸೀಸನ್ ಅಂತ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿ ಮಾತು ಮುಗಿಸಿ ಬಿಟ್ಟಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಸೇರಿದಂತೆ ಇತರ ನಿಲ್ದಾಣದ ವೀಡಿಯೋಗಳನ್ನೂ ಶೇರ್ ಮಾಡಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
08/10/2021 01:33 pm