ಬೆಂಗಳೂರು: ಬೆಂಗಳೂರಲ್ಲಿರೋ ಬಹುತೇಕ ಹಳೇ ಕಟ್ಟಡಗಳೆಲ್ಲ ಈಗ ಕುಸಿದು ಬೀಳುತ್ತಿವೆ. ಆದರೆ, ದುರಂತ ನೋಡಿ, ಕೇವಲ 5 ವರ್ಷದ ಹಿಂದೆ ಕಟ್ಟಿದ್ದ ಬಹುಮಹಡಿ ಕಟ್ಟಡವೊಂದು ಈಗ ಧರೆಗುರುಳಿದೆ. ಅದೃಷ್ಟವಶಾತ್ ಯಾರೂ ಪ್ರಾಣ ಕಳೆದುಕೊಂಡಿಲ್ಲ.
ಇಲ್ಲಿಯ ಬಾಣಸವಾಡಿಯ ಕಸ್ತೂರಿನಗರದ ಡಾಕ್ಟರ್ಸ್ ಬಡಾವಣೆಯ ಮೂರಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. 5 ವರ್ಷದ ಹಿಂದಷ್ಟೇ ಕಟ್ಟಿದ್ದ ಈ ಬಿಲ್ಡಿಂಗ್ ಕಳಪೆ ಮಟ್ಟದ್ದೇ ಆಗಿದೆ. ಅದಕ್ಕೇನೆ ಈಗ ಬಿದ್ದು ಹೋಗಿದೆ. ಆದರೆ ಇಡೀ ಬಿಲ್ಡಿಂಗ್ ಕುಸಿಯುವ ಮುನ್ಸೂಚನೆ ಸಿಕ್ಕ ಕೂಡಲೇ, ಬಿಲ್ಡಿಂಗ್ ನಲ್ಲಿದ್ದ ನಿವಾಸಿಗಳು ಓಡಿ ಹೊರಗೆ ಬಂದಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಮಾಲೀಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
PublicNext
07/10/2021 07:01 pm