ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ಜಿಲ್ಲೆಯಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ: ಮಕ್ಕಳೊಂದಿಗೆ ಕ್ರಿಮಿನಾಶಕ ಸೇವಿಸಿದ ತಾಯಿ

ಗದಗ: ಹೊಳೆ ಆಲೂರಿನ ಹೃದಯ ವಿದ್ರಾವಕ ಪ್ರಕರಣ ಮಾಸುವ ಮುನ್ನವೇ ಗದಗ ಜಿಲ್ಲೆಯಲ್ಲಿ ಮತ್ತೊಂದು ತಾಯಿ, ಮಕ್ಕಳ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಹೌದು. ಇಬ್ಬರು ಮಕ್ಕಳೊಂದಿಗೆ ಕ್ರಿಮಿನಾಶಕ ಸೇವಿಸಿ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

ತಾಯಿ ಹಾಗೂ ಎರಡು ವರ್ಷದ ಮಗು ಸಾವನ್ನಪ್ಪಿದ್ದು, ಇನ್ನೋರ್ವ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಯಲ್ಲವ್ವ (27) 02 ವರ್ಷದ ಮಗು ಸ್ವಪ್ನಾ ಮೃತ ದುರ್ದೈವಿಗಳು. ಆರು ವರ್ಷದ ಬಾಲಕ ಸಮರ್ಥ ಪ್ರಾಣಾಪಾಯದಿಂದ ಪಾರಾಗಿದ್ದು,

ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಬಾಲಕ ಸಮರ್ಥನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯಲ್ಲವ್ವ ಕಳೆದ 14 ವರ್ಷಗಳಿಂದ ಎದೆ ನೋವು ಖಾಯಿಲೆಯಿಂದ ಬಳಲುತ್ತಿದ್ದಳು. ಇತ್ತೀಚಿಗೆ ಎದೆ ನೋವು ವಿಪರೀತವಾಗಿ ಕಾಣಿಸಿಕೊಂಡಿತ್ತು. ಮಾನಸಿಕವಾಗಿ ನೊಂದ ಯಲ್ಲವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಎದೆ ನೋವು ತಾಳಲಾರದೆ ಮಕ್ಕಳೊಂದಿಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ವಾರವಷ್ಟೇ ರೋಣ ತಾಲೂಕಿನಲ್ಲಿ ಮಕ್ಕಳೊಂದಿಗೆ ನದಿಗೆ ಹಾರಿದ್ದ ತಾಯಿ. ಆ ಘಟನೆ ಮಾಸುವ ಮುನ್ನವೇ ಇದೀಗ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

06/10/2021 05:50 pm

Cinque Terre

65.72 K

Cinque Terre

4

ಸಂಬಂಧಿತ ಸುದ್ದಿ