ಬೆಂಗಳೂರು : ತನ್ನನ್ನು ಪ್ರೀತಿಸಲು ಯುವತಿ ನಿರಾಕರಿಸಿದಕ್ಕೆ ಕೋಪಗೊಂಡ ಪಾಗಲ್ ಪ್ರೇಮಿ ಆಕೆ ತಂದೆ ಕೊಲೆಗೆ ಸ್ಕೆಚ್ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತನ್ನ ಸಹಚರರ ಜತೆ ಹೊಂಚು ಹಾಕಿದ ರೌಡಿಯನ್ನ ವಿಲ್ಸನ್ ಗಾರ್ಡನ್ ಠಾಣೆಯ ಸಿಸಿಬಿ ಟೀಂ ಅರೆಸ್ಟ್ ಮಾಡಿದೆ. ರೌಡಿಗಳಾದ ಡೇವಿಡ್, ಮಂಜುನಾಥ್ ,ಹಾಗೂ ಮಂಜುನಾಥ್ ಸೇರಿದಂತೆ ಒಟ್ಟು ಹತ್ತು ಮಂದಿಯ ಬಂಧನವಾಗಿದೆ.
ಇನ್ನು ಬಂಧಿತರಿಂದ ಮಾರಕಾಸ್ತ್ರ, ಹಣ ಹಾಗೂ ಮೊಬೈಲ್ ಗಳ ಜಪ್ತಿ ಮಾಡಲಾಗಿದೆ ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ್ದ ಪೊಲೀಸರು ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಹೌದು ಕೆಲ ದಿನಗಳ ಹಿಂದೆ ಆಟೋ ಚಾಲಕನ ಪುತ್ರಿಗೆ ಡೇವಿಡ್ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಯುವತಿ ತಂದೆ, ನನ್ನ ಮಗಳ ತಂಟೆ ಬಂದರೆ ಸರಿಯಿರುವುದಿಲ್ಲನಾನು ಪೊಲೀಸರಿಗೆ ದೂರುಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ರು, ಇದಾದ ನಂತರವು ಯುವತಿ ಹಿಂದೆ ಬಿದ್ದಿದ್ದ ಡೇವಿಡ್ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ.
ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ದಳದ ಎಸಿಪಿ ಧರ್ಮೇಂದ್ರ ನೇತೃತ್ವದ ತಂಡದಿಂದ ದಾಳಿ ನಡೆಸಿ ಆರೋಪಿತರನ್ನು ಅರೆಸ್ಟ್ ಮಾಡಿದ್ದಾರೆ.
PublicNext
05/10/2021 01:09 pm