ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.ಕೆ ರವಿ ಕುರಿತಾಗಿ 'ನಗ್ನಸತ್ಯ' ಪುಸ್ತಕ: ಅದರೊಳಗೇನಿದೆ ಗುಟ್ಟು?

ಬೆಂಗಳೂರು: ಅವರು ರೋಚಕ ನಡೆಯ ಐಎಎಸ್ ಅಧಿಕಾರಿ. ತಮ್ಮ ಅಧಿಕಾರ ಬಳಸಿ ಲ್ಯಾಂಡ್ ಮಾಫಿಯಾ, ಮರಳು ಮಾಫಿಯಾಗಳನ್ನು ಮಟ್ಟ ಹಾಕಿದ್ದರು. ಕೋಲಾರದ ಮಹಾಜನತೆ ಅವರನ್ನು ಸಾಕ್ಷಾತ್ ದೇವರೆಂದೇ ಹೊತ್ತು ಮೆರೆಸಿದ್ದರು. ಬಡವರ ಅಸಹಾಯಕರ ಸಂಕಷ್ಟಕ್ಕೆ ಅವರು ತತ್ ಕ್ಷಣವೇ ಸ್ಪಂದಿಸುತ್ತಿದ್ದರು.

ಯೆಸ್. ನಾವು ಹೇಳುತ್ತಿರೋದು ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಬಗ್ಗೆ. ಇವರ ಬಗ್ಗೆ ಬಯೋಗ್ರಫಿ ಪುಸ್ತಕವೊಂದು ಬಂದಿದೆ. ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಈ ಹೊತ್ತಿಗೆಯನ್ನು ಬರೆದಿದ್ದಾರೆ. ಕನ್ನಡಕ್ಕೆ ಅ.ನಾ ಪ್ರಹ್ಲಾದ್ ರಾವ್ ತರ್ಜುಮೆ ಮಾಡಿದ್ದಾರೆ‌.

ಲೇಖಕರು ನಗ್ನಸತ್ಯ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ ಡಿ.ಕೆ ರವಿ ಬಗ್ಗೆ ಕೆಲವು ಮಹತ್ವದ ಅಂಶಗಳು ಇಲ್ಲಿವೆ.

*ಕೋಲಾರ ಡಿ.ಸಿಯಾಗಿದ್ದ ಡಿ.ಕೆ ರವಿ ಮರಳು ಮಾಫಿಯಾ ಲ್ಯಾಂಡ್ ಮಾಫಿಯಾ ಮೇಲೆ ಕೈಗೊಂಡ ಕಾರ್ಯಾಚರಣೆಗಳು ಅವರಲ್ಲಿನ ದಿಟ್ಟತನ ಪ್ರದರ್ಶಿಸಿತ್ತು.

*ಮಾಧ್ಯಮದ ನಿಕಟ ಸಂಪರ್ಕವನ್ನು ಅವರು ಬಳಸಿಕೊಂಡಿದ್ದರು.

*ಅವರ ದುರಂತ ಪತನದ ಹಿಂದೆ ಖಿನ್ನತೆ ಅಡಗಿತ್ತು.

*ಸ್ನೇಹಿತರೊಂದಿಗೆ ಸೇರಿ ರಿಯಲ್ ಎಸ್ಟೇಟ್ ಉದ್ಯಮ ಮಾಡಿ 500 ಕೋಟಿ ಗಳಿಸುವ ಗುರಿ ಹೊಂದಿದ್ದರು.

*ಆದರೆ ಈ ಉದ್ಯಮ ತಿಮಿಂಗಿಲಗಳಿಂದ ತುಂಬಿದೆ. ಇಲ್ಲಿ ಹಣ ಗಳಿಕೆ ಸುಲಭವಲ್ಲವೆಂದು ಸುಮ್ಮನಾಗಿದ್ದರು.

*ನೆರೆ ಜಿಲ್ಲೆಯ ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ ಭಾವನಾತ್ಮಕ ನಂಟು ಬೆಳೆಸಿಕೊಂಡಿದ್ದರು. ಇದು ಒನ್ ಸೈಡ್ ಪ್ರೇಮವೆಂದು ತೋರುತ್ತಿತ್ತು.

*ಇದನ್ನರಿತ ಮಹಿಳಾ ಅಧಿಕಾರಿ, ಇದರಿಂದ ಇಬ್ಬರ ದಾಂಪತ್ಯ ಮತ್ತು ವೃತ್ತಿ ಘನತೆಯನ್ನು ಹಾಳು ಮಾಡುತ್ತದೆಂದು ಅರಿತು ರವಿ ಅವರನ್ನು ಕೈ ಬಿಟ್ಟರು.

*ಇದು ಡಿ.ಕೆ ರವಿ ಅವರ ಬದುಕು ದುರಂತ ಅಂತ್ಯವಾಗಲು ಬಹುತೇಕ ಕಾರಣವಾಯ್ತು.

ಈ ಎಲ್ಲ ಅಂಶಗಳನ್ನು ಲೇಖಕ ರಾಮಕೃಷ್ಣ ಉಪಾಧ್ಯ ಅವರು ಡಿ.ಕೆ ರವಿ ಕುರಿತಾದ 'ನಗ್ನ ಸತ್ಯ' ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.‌

Edited By : Shivu K
PublicNext

PublicNext

03/10/2021 10:12 pm

Cinque Terre

151.3 K

Cinque Terre

13

ಸಂಬಂಧಿತ ಸುದ್ದಿ