ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಮಲಪ್ರಭಾ ನದಿಯಲ್ಲಿ ಮಗುವಿನೊಂದಿಗೆ ನದಿಗೆ ಹಾರಿದ್ದ ತಾಯಿ ಅದೃಷ್ಟವಶಾತ್ ಬದುಕಿ ಬಂದಿದ್ದಳು. ಆದ್ರೆ ಈಕೆಯೊಂದಿಗೆ ಇದ್ದ ಮಗು ಶ್ರೇಷ್ಠಾ ನಾಪತ್ತೆಯಾಗಿದ್ದಳು. ಆದ್ರೆ ಮೂರು ದಿನಗಳ ಬಳಿಕ ಶ್ರೇಷ್ಠಾ ಶವವಾಗಿ ಪತ್ತೆಯಾಗಿದ್ದಾಳೆ.
ಸೆಪ್ಟೆಂಬರ್ 29 ಕ್ಕೆ ಮಲಪ್ರಭಾ ನದಿಯಲ್ಲಿ ತಾಯಿ ಉಮಾದೇವಿಯೊಂದಿಗೆ ಈ ಮಗು ನಾಪತ್ತೆಯಾಗಿತ್ತು. ಮಗುವಿಗಾಗಿ ಅಗ್ನಿ ಶಾಮಕ ಸಿಬ್ಬಂದಿ ಎರಡು ದಿನದಿಂದ ಶೋಧ ಕಾರ್ಯಾಚರಣೆ ನಡೆಸಿದ್ದರು. ಇಂದು ಬೆಳಿಗ್ಗೆ ಅಮರಗೋಳ ಸಮೀಪ ಮಗುವಿನ ದೇಹ ಪತ್ತೆಯಾಗಿದೆ. ಅದೇ ದಿನ ಪವಾಡ ಸದೃಶವಾಗಿ ಜೀವಂತವಾಗಿ ಬಂದಿದ್ದ ಉಮಾದೇವಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
PublicNext
01/10/2021 01:42 pm