ಬೆಂಗಳೂರು: ಮೆಟ್ರೋ ಕಾಮಗಾರಿಯಿಂದ 30 ಅಡಿ ಮಣ್ಣು ಕುಸಿದಿದ್ದು, ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ.
ನಗರದ ಗೊಟ್ಟಿಗೆರೆಯಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿ ಈ ದುರಂತ ನಡೆದಿದೆ. ಇತ್ತೀಚೆಗಷ್ಟೆ ಸುರಂಗ ಕೊರೆದು ಊರ್ಜಾ (ಟನಲ್ ಬೋರಿಂಗ್ ಮಷಿನ್) ಹೊರ ಬಂದಿತ್ತು. ಟನಲ್ ಪ್ರೆಶರ್ಗೆ ಮಣ್ಣು ಕುಸಿದು ಭಾರಿ ಸಮಸ್ಯೆ ಉಂಟಾಗಿದೆ. ಮುಂಜಾನೆ 3 ಗಂಟೆಯಲ್ಲಿ ಮುಚ್ಚಿದ್ದ ಬಾವಿಯ ಮಣ್ಣು ಕುಸಿದು ಕೆಳಗೆ ಬಿದ್ದಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲೀಕ ಝಬೀ ಎನ್ನುವವವರಿಗೆ ಸೇರಿದ ಜಾಗದಲ್ಲಿ ನಡೆದ ಅನಾಹುತಕ್ಕೆ ಬಿಎಂಆರ್ಸಿಎಲ್ ಅಧಿಕಾರಿಗಳೇ ಇದಕ್ಕೆ ಕಾರಣ ಎಂದು ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಒತ್ತಾಯಿಸಿದ್ದಾರೆ.
PublicNext
30/09/2021 05:20 pm