ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ (48) ಸಾಯಿಗಂಗಾ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ.
ಶ್ರೀಗಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಾಗ ಡಾ. ವಿಜಯ ರಾಘವೇಂದ್ರ ಅವರು ಚಿಕಿತ್ಸೆ ನೀಡಿದ್ದರು. ಆರಂಭದಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದ ವೈದ್ಯ ನಂತರ ನಿರ್ಲಕ್ಷ ವಹಿಸಿದ್ದರು ಎನ್ನಲಾಗಿದೆ. ಡಾ. ವಿಜಯ ರಾಘವೇಂದ್ರ ಚಿಕಿತ್ಸೆ ನೀಡುವಲ್ಲಿ ವಿಫಲರಾಗಿದ್ದು, ಆಸ್ಪತ್ರೆ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಕಾರಣ ಕೇಳಿ ನೋಟಿಸ್ ನೀಡಿದೆ.
ಈ ಬಗ್ಗೆ ಆಸ್ಪತ್ರೆ ಮಂಡಳಿ ಉತ್ತರ ನೀಡಿತ್ತು. ಆದರೆ ಆಸ್ಪತ್ರೆ ಕೊಟ್ಟ ಉತ್ತರ ಸಮಂಜಸವಲ್ಲದ ಕಾರಣ, ಜಿಲ್ಲಾ ಆರೋಗ್ಯಾಧಿಕಾರಿ, ಡಾ. ನಾಗೇಂದ್ರಪ್ಪ ಆಸ್ಪತ್ರೆಗೆ ನೋಟೀಸ್ ಜಾರಿ ಮಾಡಿದ್ದಾರೆ.
PublicNext
29/09/2021 01:09 pm