ಬೆಂಗಳೂರು: ಮಹಾನಗರದಲ್ಲಿ ನಿನ್ನೆಯಷ್ಟೇ ಕಟ್ಟಡ ಕುಸಿತವಾಗಿತ್ತು. ಈಗ ಮತ್ತಿಂದು ಕಟ್ಟಡ ಕುಸಿತವಾಗಿದೆ. ಡೇರಿ ಸರ್ಕಲ್ ಬಳಿ ಈ ಅವಘಡ ಸಂಭವಿಸಿದೆ. KMF ಕಚೇರಿ ಬಳಿಯ ಕ್ವಾಟರ್ಸ್ ಕಟ್ಟಡ ಇದಾಗಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
50 ವರ್ಷದಷ್ಟು ಹಳೆಯ ಕಟ್ಟಡ ಇದಾಗಿದ್ದು ಭೀಕರ ಕುಸಿತ ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಘಟನೆ ವೇಳೆ ಒಂದು ಕುಟುಂಬದವರು ಕಟ್ಟಡದಲ್ಲಿದ್ದರು. ಕುಸಿಯುವ ಲಕ್ಷಣ ಕಂಡು ಬರುತ್ತಿದ್ದಂತೆ ಅಕ್ಕಪಕ್ಕದವರು ಕೂಗಾಡಿದ್ದಾರೆ. ಆಗ ತಕ್ಷಣ ಕಟ್ಟಡದಲ್ಲಿದ್ದವರು ಹೊರಬಂದಿದ್ದಾರೆ. ಈ ಮೂಲಕ ದುರಂತವೊಂದು ತಪ್ಪಿದಂತಾಗಿದೆ.
PublicNext
28/09/2021 11:25 am