ರಾಮನಗರ: ಬೆಂಗಳೂರು ನಗರ ಹಾಗೂ ಸುತ್ತಲೂ ಗಾಂಜಾ ಘಾಟು ಪ್ರಕರಣಗಳು ಇತ್ತೀಚೆಗೆ ಸದ್ದು ಮಾಡ್ತಾ ಇವೆ. ಈಗ ಮತ್ತೊಂದು ಗಾಂಜಾ ಕೇಸ್ ಪತ್ತೆಯಾಗಿದೆ.
ರಾಮನಗರ ಜಿಲ್ಲೆ ಬಿಡದಿಯ ಈಗಲ್ ಟನ್ ವಿಲೇಜ್ ವಿಲ್ಲಾದಲ್ಲಿ ಬೆಳೆಯಲಾಗಿದ್ದ ಗಾಂಜಾ ಪ್ಲ್ಯಾಂಟ್ಸ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದನ್ನೆಲ್ಲ ಬೆಳೆಸಿದ ವಿದೇಶಿ ಆರೋಪಿಯನ್ನು ಬಂಧಿಸಿದ್ದಾರೆ.
ಇರಾನಿ ಮೂಲದ ಜಾವಿದ್ ರುಸ್ತುಂ ಪುರಿ(36) ಎಂಬಾತನೇ ಬಂಧಿತ ಆರೋಪಿ. ಈತ ತಾನು ಮನೆಯಲ್ಲೇ ಹೈಡ್ರೋ ಗಾಂಜಾ ಬೆಳೆದಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಈತನಿಂದ 150ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
PublicNext
28/09/2021 08:10 am