ತುಮಕೂರು: ತನ್ನ ತಾಯಿಯ ಬಗ್ಗೆ ಅಸಭ್ಯವಾಗಿ ಮಾತನಾಡಿದ ವ್ಯಕ್ತಿಯೊಬ್ಬನನ್ನು ಕೊಲೆಗೈದ ಘಟನೆ ಗುಬ್ಬಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ನಡೆದಿದೆ.
ಮುದಿಗೆರೆ ಗ್ರಾಮದ ರಾಜಣ್ಣ (55) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಮಹೇಶ್ ಕೊಲೆ ಮಾಡಿದ ಆರೋಪಿ. ರಾಜಣ್ಣ ಕಳೆದ ಎರಡು ವರ್ಷಗಳ ಹಿಂದೆ ಪತ್ನಿಯೊಂದಿಗಿನ ಮನಸ್ತಾಪದಿಂದಾಗಿ ಬೇರೆ ವಾಸಿಸುತ್ತಿದ್ದನಂತೆ. ಭಾನುವಾರ ತಡರಾತ್ರಿ ರಾಜಣ್ಣ ಜತೆ ಮಹೇಶ್ ಮನೆಯಲ್ಲಿ ಕುಡಿಯುತ್ತಿದ್ದ. ಈ ವೇಳೆ ರಾಜಣ್ಣ, ಮಹೇಶ್ ತಾಯಿ ವಿಚಾರವಾಗಿ ಕೆಟ್ಟದ್ದಾಗಿ ಮಾತಾಡಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಕೋಪಗೊಂಡ ಮಹೇಶ್, ರಾಜಣ್ಣನೊಂದಿಗೆ ಜಗಳ ಆರಂಭಿಸಿದ್ದಾನೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಮಹೇಶ್ ಮಚ್ಚಿನಿಂದ ರಾಜಣ್ಣನನ್ನು ಕೊಚ್ಚಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಗುಬ್ಬಿ ಠಾಣೆಯ ಸಬ್ಇನ್ಸ್ಪೆಕ್ಟರ್ ನಟರಾಜ್, ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
PublicNext
27/09/2021 06:48 pm