ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್ ಚಾಲಕ ಯುವತಿ ಮೇಲೆ ಅತ್ಯಾಚಾರ ಪ್ರಕರಣವೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸ್ ತನಿಖಾ ವೇಳೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.
ಆರೋಪಿ ಹಾಗೂ ಆರೋಪ ಮಾಡಿದ ಯುವತಿಗೂ ಇದಕ್ಕೂ ಮುಂಚೆಯೇ ಪರಿಚಯ ಇತ್ತು. ಹಲವು ಸಲ ಯುವತಿಗೆ ಈತ ಡ್ರಾಪ್ ಕೊಟ್ಟಿದ್ದ ಪರಿಚಯವಾಗಿ ತಾವಿಬ್ಬರೂ ಮೊಬೈಲ್ ನಂಬರ್ ಶೇರ್ ಮಾಡಿದ್ದರು. ಇಬ್ಬರ ನಡುವೆ ಸ್ನೇಹವೂ ಇತ್ತು ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.
ತನಿಖೆ ವೇಳೆ ಪೊಲೀಸರು ಮೊಬೈಲ್ ಫೋನ್ ಪರಿಶೀಲಿಸಿದಾಗ ಈ ಮಾಹಿತಿ ಸಿಕ್ಕಿದೆ. ಇದರ ಆಧಾರಿತವಾಗಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
25/09/2021 01:21 pm