ಜೈಪುರ (ರಾಜಸ್ಥಾನ): ಈ ಸುದ್ದಿಯನ್ನು ಸುಳ್ಳು ಎನ್ನುವವರೇ ಹೆಚ್ಚು ಆದರೆ ಇದು ಸತ್ಯ. ಮದುವೆಯಾದ ಮೇಲೆ ಏಳು ತಿಂಗಳು ಒಟ್ಟಿಗಿದ್ದ ಮಹಿಳೆಗೆ ಶಾಕ್ ಆಗಿದೆ. ತಾನು ಇಷ್ಟು ದಿನ ಗಂಡ ಎಂದುಕೊಂಡವ ಅಸಲಿಗೆ ಗಂಡಸೇ ಅಲ್ಲ, ಬದಲಿಗೆ ಹೆಣ್ಣು ಎಂದು ದಿಗಿಲಾಗಿರುವ ವಿಚಿತ್ರ ಘಟನೆ ರಾಜಸ್ಥಾನದ ಜೈಪುರದ ಕೋಟಾ ಎಂಬಲ್ಲಿ ನಡೆದಿದೆ.
ಕೆಲ ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ವೈರಲ್ ಆಗಿದೆ. ಇದರಲ್ಲಿ 30 ವರ್ಷದ ಮಹಿಳೆ ಮೋಸ ಹೋದವಳು. ಗಂಡನನ್ನು ಕಳೆದುಕೊಂಡ ಮಹಿಳೆಯೋರ್ವಳು ಇಬ್ಬರು ಮಕ್ಕಳೊಂದಿಗೆ ನಾರಿಶಾಲಾ ಎಂಬ ಮಹಿಳಾ ಆಶ್ರಮದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಇದೇ ಆಶ್ರಮಯಕ್ಕೆ ವಿಜೇತಾ ಎಂಬಾಕೆ ತನ್ನ ಹೆಸರನ್ನು ವಿಕಾಸ್ ಎಂದು ಬದಲಿಸಿಕೊಂಡು ಆಶ್ರಮಕ್ಕೆ ಬಂದಿದ್ದಳು. ಅದು ಮಹಿಳಾ ಆಶ್ರಮ ಆಗಿದ್ದರಿಂದ ಇಲ್ಲಿಗೇಕೆ ಬಂದೆ ಎಂದು ಕೇಳಿದಾಗ ತನ್ನನ್ನು ಪೊಲೀಸರು ಮಹಿಳೆ ಎಂದು ತಪ್ಪಾಗಿ ಇಲ್ಲಿಗೆ ಕಳಿಸಿದ್ದಾರೆ, ನಾನು ಪುರುಷ. ನನಗೆ ಕೆಲಸದ ಅಗತ್ಯವಿದೆ ಎಂದೆಲ್ಲಾ ಸಬೂಬು ಹೇಳಿ ಅಲ್ಲಿಯೇ ವಿಕಾಸ ಉಳಿದುಕೊಂಡಿದ್ದಾರೆ.
ನಂತರ ಈ ವಿಧವೆ ಮಹಿಳೆಗೆ ಬಾಳು ಕೊಡುವುದಾಗಿ ಹೇಳಿದಳು. ತನಗೂ ಗಂಡಿನ ಅಗತ್ಯವಿದ್ದುದರಿಂದ ಮಹಿಳೆ ಒಪ್ಪಿಕೊಂಡಳು. ನಂತರ ಏಳು ತಿಂಗಳು ಪತಿ-ಪತ್ನಿಯಂತೆ ಒಟ್ಟಿಗೇ ಇದ್ದರು. ವಿಜೇತಾ ತನ್ನ ಹೆಣ್ತತನ ಗುಟ್ಟನ್ನು ಮರೆಮಾಚಲು ತನ್ನನ್ನು ಬೆತ್ತಲೆಯಾಗಿ ನೋಡಿದವರು ಸತ್ತು ಹೋಗುತ್ತಾರೆ ಎಂದು ಮಂತ್ರವಾದಿಯೊಬ್ಬ ಹೇಳಿದ್ದಾನೆ, ಆದ್ದರಿಂದ ನಾನು ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಎಂದಿದ್ದಳು. ಇದರಿಂದ ಹೆದರಿ ಮಹಿಳೆ ಒಪ್ಪಿಕೊಂಡಿದ್ದಳು.
ಏಳು ತಿಂಗಳ ನಂತರ ಅದೊಂದು ದಿನ ಮಹಿಳೆಯ ಬಳಿ ಇದ್ದ ಸುಮಾರು 1.5 ಲಕ್ಷ ರೂ ನಗದು ಹಾಗೂ ಸುಮಾರು 3 ಲಕ್ಷ ರೂಪಾಯಿಯ ಚಿನ್ನದ ಒಡವೆ ದೋಚಿ ಪರಾರಿಯಾದಳು. ಈ ವೇಳೆ ಮಹಿಳೆ ದೂರು ದಾಖಲಿಸಿದಳು. ಈ ದೂರಿನನ್ವಯ ಪೊಲೀಸರು ಆಕೆಯನ್ನು ಬಂಧಿಸಿದಾಗ ಅಸಲಿಯತ್ತು ಬಯಲಾಗಿದೆ. ಆಕೆ ಅವನಲ್ಲ ಅವಳು ಎಂದು ತಿಳಿದಿದೆ!
PublicNext
21/09/2021 04:13 pm