ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸ್ಲಿಂ ವ್ಯಕ್ತಿಗೆ ಗೆಳತಿಯಿಂದಲೇ ಚಪ್ಪಲಿ ಏಟು: ಒತ್ತಡ ಹೇರಿದ ಹಿಂದೂ ಜಾಗರಣ್ ಮಂಚ್ ಮುಖಂಡ ಅರೆಸ್ಟ್

ಲಕ್ನೋ: ಮುಸ್ಲಿಂ ವ್ಯಕ್ತಿಗೆ ಚಪ್ಪಲಿ ಏಟು ಕೊಡಲು ಮಹಿಳೆಗೆ ಒತ್ತಾಯಿಸಿದ ಆರೋಪದ ಮೇಲೆ ಹಿಂದೂ ಜಾಗರಣ್ ಮಂಚ್ ನಾಯಕನನ್ನು ಉತ್ತರ ಪ್ರದೇಶದ ಮೀರತ್‌ನ ಪೊಲೀಸರು ಬಂಧಿಸಿದ್ದಾರೆ.

ಗುಂಪೊಂದು ಮಹಿಳೆಯೊಬ್ಬಳು ತನ್ನ ಗೆಳೆಯನಿಗೆ ಚಪ್ಪಲಿ ಏಟು ಕೊಡುವಂತೆ ಒತ್ತಾಯಿಸಿದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. "ನಾವು ನಿಮ್ಮ ಸಹೋದರರು, ಚಿಂತಿಸಬೇಡ ಹೊಡಿ. ಇಷ್ಟೇನಾ? ಇನ್ನೂ ಜೋರಾಗಿ ಹೊಡಿ. ನಿನ್ನ ಶಕ್ತಿ ಎಲ್ಲವನ್ನೂ ಹಾಕಿ ಹೊಡಿ" ಎಂದು ಅಲ್ಲಿದ್ದವರು ಮಹಿಳೆಗೆ ಒತ್ತಾಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹೌದು. ಮೀರತ್‌ನ ಜನನಿಬಿಡ ಮಾರುಕಟ್ಟೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮಾರುಕಟ್ಟೆಯಲ್ಲಿದ್ದ ಮರವೊಂದರ ಮುಸ್ಲಿಂ ಯುವಕ ಹಾಗೂ ಯುವತಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಹಿಂದೂ ಜಾಗರಣ್ ಮಂಚ್‌ನ ಕೆಲವರು, ಯುವಕನನ್ನು ಹಿಡಿದು ನಿನ್ನ ಹೆಸರು ಏನು? ಯಾರು ಈ ಹುದುಗಿ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಮೊಬೈಲ್‌ ತೆಗೆದುಕೊಂಡು ಇದರಲ್ಲಿ ಹುಡುಗಿಯ ಫೋಟೋಗಳಿವೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಆತನ ಜೊತೆಗಿದ್ದ ಯುವತಿಯಿಂದ ಚಪ್ಪಲಿ ಏಟು ಕೊಡಿಸಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮೀರತ್ ಪೊಲೀಸರು ಹಿಂದೂ ಜಾಗರಣ್ ಮಂಚ್‌ನ ಮುಖಂಡ ಹಾಗೂ ಓರ್ವ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

21/09/2021 09:42 am

Cinque Terre

118.55 K

Cinque Terre

27

ಸಂಬಂಧಿತ ಸುದ್ದಿ