ಗುವಾಹಟಿ: 12 ವರ್ಷದ ಅಸ್ಸಾಂ ಹುಡುಗ ಆನ್‌ಲೈನ್ ಗೇಮಿಂಗ್ ವ್ಯಸನಿಯಾಗಿದ್ದು, 7ನೇ ತರಗತಿಯ ಈ ವಿದ್ಯಾರ್ಥಿ ತನ್ನ ಆನ್‌ಲೈನ್ ಆಟಕ್ಕೆ ತಂದೆ ಕಷ್ಟಪಟ್ಟು ಸಂಪಾದಿಸಿದ್ದ 19 ಲಕ್ಷ ರೂ.ಗಳನ್ನು ವ್ಯರ್ಥ ಮಾಡಿದ್ದಾನೆ.
ಆಟವಾಡಲು ವರ್ಚುವಲ್ ಗನ್ ಮತ್ತು ಕಾರುಗಳನ್ನು ಖರೀದಿಸಿದ್ದ ಬಾಲಕ, ನಂತರ ಗೇಮಿಂಗ್ ಪ್ಲಾಟ್ಫಾರ್ಮ್ನಲ್ಲಿ 20 ವರ್ಷದ ಯುವಕನ ಸ್ನೇಹ ಮಾಡಿದ್ದಾನೆ. ಅಪ್ರಾಪ್ತ ಬಾಲಕನ ತಂದೆ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕ ತನ್ನ ತಾಯಿಯ ಮೊಬೈಲ್ ಫೋನ್ ಅನ್ನು ತನ್ನ ಆನ್‌ಲೈನ್ ತರಗತಿಗಳಿಗೆ ಬಳಸುತ್ತಿದ್ದ. ಆದರೆ ಆನ್‌ಲೈನ್ ಕ್ಲಾಸ್ ಬದಲು ಆತ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಅಥವಾ ಬಿಜಿಎಂಐ, ಆನ್‌ಲೈನ್ ಗೇಮ್ ಆಡಲು ಸಾಕಷ್ಟು ಸಮಯ ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಬಾಲಕನ ವಿಶ್ವಾಸ ಗೆಲ್ಲಲು ವರ್ಚುವಲ್ ಗನ್ ಮತ್ತು ಇತರ ಪರಿಕರಗಳನ್ನು ಖರೀದಿಸಲು ಸಹಾಯ ಮಾಡಿದ್ದಾನೆ. ನಂತರ ಅಪ್ರಾಪ್ತ ಬಾಲಕ ಆರೋಪಿಗಳ ಸಹಾಯದಿಂದ ಐಫೋನ್ ಸೇರಿದಂತೆ ಎರಡು ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದಾನೆ. ಮಗ ಎರಡು ಬೆಲೆ ಬಾಳುವ ಫೋನ್‌ಗಳನ್ನು ಖರೀದಿಸಿದ್ದನ್ನು ಗಮನಿಸಿ ಪೋಷಕರು ಅನುಮಾನಗೊಂಡಿದ್ದಾರೆ. ಆದರೆ ಅಷ್ಟರಲ್ಲೇ ಆರೋಪಿಗಳು ಮಹಿಳೆಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಸುಮಾರು 19 ಲಕ್ಷ ರೂ.ಗಳ ಲಪಟಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
PublicNext
21/09/2021 08:51 am