ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬ್ಯಾನರ್ ಅಂಟಿಸಿ ಪೊಲೀಸರಿಂದ ವಸೂಲಿ ಆರೋಪ: ವಿಡಿಯೋ ನೋಡಿ

ಬೆಂಗಳೂರು: ತಂಬಾಕು ವಿರುದ್ಧದ ಜಾಗೃತಿ ಒಳ್ಳೆಯದೇ. ಆದ್ರೆ ಬೆಂಗಳೂರಿನ ಪೊಲೀಸರು ಅದನ್ನೇ ದಂಧೆ ಮಾಡ್ಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಾನ್‌ ಶಾಪ್ ಹಾಗೂ ಇನ್ನಿತರ ಡಬ್ಬಾ ಅಂಗಡಿಗಳಲ್ಲಿ ಸಿಗರೇಟ್ ಹಾಗೂ ಇತರ ತಂಬಾಕು ಪದಾರ್ಥಗಳ ಮಾರಾಟಕ್ಕೆ ಅವಕಾಶ ಇದೆ. ಈ ಅಂಗಡಿಗಳಿಗೆ ಹೋದ ಪೊಲೀಸರು ಅಂಗಡಿಕಾರರಿಗೆ ತಂಬಾಕು ವಿರೋಧಿ ಜಾಗೃತಿ ಬ್ಯಾನರ್ ಕೊಟ್ಟು ತಲಾ 300 ರೂ. ವಸೂಲಿ ಮಾಡ್ತಿದ್ದಾರೆ. ಇದಕ್ಕೆ ಏಜೆಂಟ್ ಗಳನ್ನೂ ನೇಮಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪಿಸಿದೆ. ಈ ಕಾರ್ಯಾಚರಣೆ ನಡೆಯುತ್ತಿರುವಾಗ ಎ.ಎಸ್.ಐ ಒಬ್ಬರನ್ನು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡ ವಿಡಿಯೋ ಈಗ ಸಾಮಾಜಿಕ‌ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ರೀತಿ ಬ್ಯಾನರ್ ಕೊಟ್ಟು ಹಣ ಕೀಳಲು ಬಿಬಿಎಂಪಿ ಅಥವಾ ಸರ್ಕಾರದ ಆದೇಶ ಇಲ್ಲ. ಆದರೂ ಯಾಕೆ ಚಿಲ್ಲರೆ ವ್ಯಾಪಾರಿಗಳ ಸುಲಿಗೆ ಮಾಡ್ತಾ ಇದ್ದೀರಿ ಅನ್ನೋದು ಕೆಆರ್‌ಎಸ್ ಪಕ್ಷದ ಪ್ರಶ್ನೆಯಾಗಿದೆ.

Edited By : Manjunath H D
PublicNext

PublicNext

20/09/2021 10:14 am

Cinque Terre

102.04 K

Cinque Terre

4