ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ- 'ಆರೋಪಿಯನ್ನ ನಮಗೆ ಒಪ್ಪಿಸಿ'; ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

ಬೆಂಗಳೂರು: ಇಲ್ಲಿನ ಸಂಜಯನಗರದಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಆರೋಪ ಸಂಬಂಧ ಪಶ್ಚಿಮಬಂಗಾಳ ಮೂಲದ ಯುವಕನನ್ನು ಸಂಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬೆನ್ನಲ್ಲೇ ಸಂಜಯನಗರ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿದ ಸಾವಿರಾರು ಜನರು, 'ಆರೋಪಿಯನ್ನು ತಮಗೆ ಒಪ್ಪಿಸಿ' ಎಂದು ಆಗ್ರಹಿಸಿದ್ದಾರೆ.

ಆರೋಪಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಆತನ ಮನೆ ಬಳಿ ತೆರಳಿ ಬಂಧಿಸಿ ಕರೆದೊಯ್ಯುವ ವೇಳೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸರ ವಾಹನಗಳನ್ನು ತಡೆದಿದ್ದಾರೆ. ಆ ಬಳಿಕ, ಸಂಜಯನಗರ ಪೊಲೀಸ್ ಠಾಣೆ ಎದುರು ನೂರಾರು ಜನರು ಸೇರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಐದು ವರ್ಷದ ಮಗುವನ್ನು ಛೋಟಾ ಬೀಮ್ ತೋರಿಸುವುದಾಗಿ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಮಗುವಿನ ಎದೆಗಳ ಮೇಲೆ ಗಾಯಗಳಾಗಿವೆ ಎಂದು ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಭಾನುವಾರ ರಾತ್ರಿ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗುವಾಗ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಂಜಯನಗರದ ಕೆಲವು ಪ್ರದೇಶದಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದೆ. ರೇವ್ ಪಾರ್ಟಿಗಳು ಸೇರಿದಂತೆ ವಿಕೃತ ಕೃತ್ಯಗಳು ನಡೆಯುತ್ತಿವೆ. ಪೊಲೀಸರು ಅಂತಹ ಪುಂಡರನ್ನು ಬಂಧಿಸಿ, ಆಮೇಲೆ ಬಿಟ್ಟು ಬಿಡುತ್ತಾರೆ. ಹೀಗಾಗಿ ನಮಗೆ ನ್ಯಾಯ ಸಿಗುತ್ತಿಲ್ಲ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಪ್ರತಿಭಟನಾನಿರತರರು ಒತ್ತಾಯಿಸಿದರು.

ಕ್ಷಣಕ್ಷಣಕ್ಕೂ ಪ್ರತಿಭಟನಾಕಾರರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಜಯನಗರ ಪೊಲೀಸರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕೆಎಸ್ ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಪೊಲೀಸ್ ಠಾಣೆಗೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.

Edited By : Vijay Kumar
PublicNext

PublicNext

19/09/2021 10:56 pm

Cinque Terre

56.64 K

Cinque Terre

10

ಸಂಬಂಧಿತ ಸುದ್ದಿ