ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೋಸ್ಟ್ ತಿನ್ನುವವರು ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ.!

ನವದೆಹಲಿ: ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಂದಾಗಿ ಮನೆಯಲ್ಲೇ ಮಾಡಿದ ಆಹಾರ ತಿನ್ನುವುದು ಉತ್ತಮ ಎನಿಸುತ್ತದೆ. ಪರೋಟಕ್ಕೆ ಉಗುಳು ಹಾಕಿ, ಪಾನಿಪುರಿಗೆ ಹಾಕುವ ಪಾನಿಗೆ ಮೂತ್ರ ಹಾಕಿದ ವಿಕೃತಿ ಬೆನ್ನಲ್ಲೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಟೋಸ್ಟ್, ಬೇಕರಿ ತಿನಿಸು ಪ್ರಿಯರಿಗೆ ಆಘಾತ ಉಂಟು ಮಾಡುತ್ತದೆ.

ಟೋಸ್ಟ್ ತಯಾರಿಕಾ ಕಾರ್ಖಾನೆಯ ಕೆಲಸಗಾರರು ಯಾವುದೇ ಸ್ವಚ್ಛತೆಯಿಲ್ಲದೆ, ಅಸಹ್ಯ ಹುಟ್ಟಿಸುವಂತಹ ದೃಶ್ಯಗಳು ಈ ವಿಡಿಯೋದಲ್ಲಿದೆ. ಕಾರ್ಖಾನೆಯ ಕೆಲವು ಕೆಲಸಗಾರರು ನೆಲದ ಮೇಲೆ ಇರಿಸಿರುವ ಟೋಸ್ಟ್‌ಗಳ ಮೇಲೆ ತಮ್ಮ ಕಾಲಿರಿಸಿಕೊಂಡು ಒಟ್ಟಿಗೆ ಕುಳಿತುಕೊಂಡಿರುವುದನ್ನು ಕಾಣಬಹುದು. ಇದು ಮಾತ್ರವಲ್ಲ ಅವರು ಪ್ಯಾಕ್ ಮಾಡುವಾಗ ಟೋಸ್ಟ್ ಅನ್ನು ನಾಲಿಗೆಯಿಂದ ನೆಕ್ಕಿ ನಂತರ ಅದನ್ನು ಪೊಟ್ಟಣದೊಳಗೆ ತುಂಬುವುದನ್ನು ಸಹ ನೋಡಬಹುದು.

ಕಾರ್ಖಾನೆಯ ಕೆಲಸಗಾರನು ಉದ್ದೇಶಪೂರ್ವಕವಾಗಿ ಇಂತಹ ಕೆಲಸ ಮಾಡಿದ್ದಾನೆ ಎಂಬುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೆಲಸಗಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

Edited By : Manjunath H D
PublicNext

PublicNext

19/09/2021 09:22 pm

Cinque Terre

138.33 K

Cinque Terre

20

ಸಂಬಂಧಿತ ಸುದ್ದಿ