ಬೆಂಗಳೂರು: ರೇವ್ ಪಾರ್ಟಿ ನಡೆಸಿದ್ದ ಯುವಕ, ಯುವತಿಯರನ್ನ ಪೊಲೀಸರು ಅಟ್ಟಾಡಿಸಿ ಬಂಧಿಸಿದ ಘಟನೆ ಬೆಂಗಳೂರು ಆನೇಕಲ್ ಸಮೀಪದಲ್ಲಿ ನಡೆದಿದೆ.
ಯುವಕ- ಯುವತಿಯರು ಆನೇಕಲ್ ಸಮೀಪದಲ್ಲಿ ಮಧ್ಯರಾತ್ರಿ ರೇವ್ ಪಾರ್ಟಿ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ನಡೆಸಿದಾಗ ಅರೆನಗ್ನ ಸ್ಥಿತಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಯುವಕ ಯುವತಿಯರು ತಪ್ಪಿಸಿಕೊಳ್ಳಲು ಜಮೀನಿನಲ್ಲಿ ಓಡಿದ್ದಾರೆ. ಅವರ ಹಿಂದೆ ಓಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಸೇರಿದಂತೆ ಸುಮಾರು 40 ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಈ ಪೈಕಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
19/09/2021 05:58 pm