ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕನಿಗೆ ಮತಾಂಧರಿಂದ ಹಲ್ಲೆ : ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು : ಕೋಮು ಗಲಬೆಗಳನ್ನು ಹುಟ್ಟುಹಾಕುವವರು ಇರುವವರೆಗೆ ನಾವು ಎಷ್ಟೇ ಅನ್ಯೂನತೆಯಿಂದ ಇದ್ದರು ವದಂತಿಗಳನ್ನು ಹರಡುವವರು ಸಮಾಜದಲ್ಲಿಯ ಶಾಂತಿಯನ್ನು ಕದಡುತ್ತಲೇ ಇರುತ್ತಾರೆ.

ಇಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಬ್ಬ ಹಿಂದು ವ್ಯಕ್ತಿ ಮುಸ್ಲಿಂ ಯುವತಿಯನ್ನು ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿರುವಾಗ ಮುಸಲ್ಮಾನ ವ್ಯಕ್ತಿಯೋರ್ವ ಆ ಬೈಕನ್ನು ತಡೆದು ನಿಲ್ಲಿಸಿ ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಅಷ್ಟೇ ಅಲ್ಲದೆ ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಬುರುಕಾ ಹಾಕಿಕೊಂಡು ಹಿಂದು ಹುಡುಗನ ಬೈಕ್ ನಲ್ಲಿ ಹೋರಟ್ಟಿದ್ದಿಯಾ ನಿಮ್ಮಂತ ಹೆಣ್ಣುಮಕ್ಕಳು ನಮ್ಮ ಧರ್ಮ ಹಾಳು ಮಾಡುತ್ತಿದ್ದಿರಿ ಎಂದು ನಿಂದಿಸಿದ್ದಾನೆ. ಜೊತೆಗೆ ಆಕೆಯ ಗಂಡನ ಮೊಬೈಲ್ ನಂಬರ ಪಡೆದು ಮಾತನಾಡಿ ಯಾಕೆ ನೀನು ಗಂಡಸಲ್ಲವೇ, ಯಾಕೆ ಬೇರೆ ಜಾತಿಯ ಗಂಡಸರೊಂದಿಗೆ ಕಳುಹಿಸುತ್ತಿಯಾ ಎಂದು ಪ್ರಶ್ನಿಸುತ್ತಾನೆ.

ಇದಕ್ಕೆ ಆ ಯುವತಿಯ ಮನೆಯವರು ಅವರು ಒಳ್ಳೆಯವರು ನಮ್ಮ ಪರಿಚಯದವರು ಏನು ಆಗುವುದಿಲ್ಲ ಎಂದು ಹೇಳುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಯುತ್ತಾರೆ.

ಇನ್ನು ಈ ಎಲ್ಲಾ ದೃಶ್ಯವನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಬ್ಲಿಕ್ ನೆಕ್ಸ್ಟ್ ನಲ್ಲಿ ತಮ್ಮ ಟ್ವೀಟ್ ಪ್ರತಿಯೊಂದನ್ನು ಪೋಸ್ಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

19/09/2021 03:27 pm

Cinque Terre

174.25 K

Cinque Terre

113