ಲಕ್ನೋ: ಲಿಫ್ಟ್ ಕೊಡುವುದಾಗಿ ನಂಬಿಸಿ ಮೂವರು ಕಾಮುಕರು 29 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ಯುವತಿಯು ಸಂಬಂಧಿಕರೊಬ್ಬರ ಮದುವೆಗಾಗಿ ಬಿಜ್ನೋರ್ ಜಿಲ್ಲೆಯ ಸಬಲಪುರ ಗ್ರಾಮಕ್ಕೆ ಹೋಗಿದ್ದಳು. ಅಲ್ಲಿಂದ ಮರಳಿ ದೆಹಲಿಗೆ ತೆರಳಲು ಯುವತಿ ಬಸ್ ನಿಲ್ದಾಣನದಲ್ಲಿ ನಿಂತಿದ್ದಳು. ಈ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ಮೂವರು ಮಹಿಳೆಗೆ ಬಿಜ್ನೋರ್‌ವರೆಗೂ ಡ್ರಾಪ್ ಕೊಡುವುದಾಗಿ ಹೇಳಿದ್ದಾರೆ. ಅವರನ್ನು ನಂಬಿದ ಯುವತಿ ಕಾರು ಹತ್ತಿದ್ದಾಳೆ.
ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ ಕಾಮುಕರು ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಯುವತಿ ಅಳುತ್ತಿದ್ದ ಧ್ವನಿ ಕೇಳಿದ ಸ್ಥಳೀಯರು ಅಲ್ಲಿಗೆ ದೌಡಾಯಿಸಿದ್ದಾರೆ. ಗ್ರಾಮಸ್ಥರು ಬರುತ್ತಿದ್ದಂತೆ ಯುವತಿಯನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಜ್ನೋರ್ ಪೊಲೀಸರು, ಕಾಮುಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
PublicNext
19/09/2021 03:04 pm