ಬೆಂಗಳೂರು: ರೇವ್ ಪಾರ್ಟಿ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ ನಡೆಸಿ 11ಕ್ಕೂ ಜನರನ್ನು ವಶಕ್ಕೆ ಪಡೆದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್ ನ ನಿರ್ಜನ ಪ್ರದೇಶದಲ್ಲಿ ತಡ ರಾತ್ರಿ ನಡೆದಿದೆ.
ದಾಳಿ ವೇಳೆ ಡ್ರಗ್ಸ್ ನಶೆಯಲ್ಲಿದ್ದ ಕೆಲ ಯುವಕ, ಯುವತಿಯರು ಪರಾರಿಯಾಗಿದ್ದಾರೆ. ಈ ಪೈಕಿ 11ಕ್ಕೂ ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೇವ್ ಪಾರ್ಟಿಯಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದು, ಮ್ಯೂಸಿಕ್ ಕಂಪನಿಯೊಂದು ಈ ಪಾರ್ಟಿ ಆಯೋಜಿಸಿತ್ತು ಎನ್ನಲಾಗಿದೆ.
PublicNext
19/09/2021 02:28 pm