ಚಿಕ್ಕಬಳ್ಳಾಪುರ: ಮನೆ, ದೇವಸ್ಥಾನ ಬಿಟ್ಟು ಎಟಿಎಂ ಗೆ ಕನ್ನ ಹಾಕಿದ ಖದೀಮರು ಎಟಿಎಂ ಒಡೆದು ಬರೋಬ್ಬರಿ 15 ಲಕ್ಷ ಹಣ ಎಗರಿಸಿ ಎಸ್ಕೇಪ್ ಆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಕ್ರಾಸ್ ನಲ್ಲಿ ನಡೆದಿದೆ. ಮಧ್ಯರಾತ್ರಿ ಗ್ರಾಮದ ಎಸ್ ಬಿಎಂ ಎಟಿಎಂ ಸೆಂಟರ್ ಗೆ ಮುಸುಕುಧಾರಿಗಳಾಗಿ ಬಂದ ದರೋಡೆಕೋರರು ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿ ಕೃತ್ಯ ನಡೆಸಿದ್ದಾರೆ. ಬೆಳಿಗ್ಗೆ ಹಣ ಡ್ರಾ ಮಾಡಲು ಬಂದ ಗ್ರಾಹಕರು ಬ್ಯಾಂಕ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದು, ಬ್ಯಾಂಕ್ ಮ್ಯಾನೇಜರ್ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ್ ಗ್ರಾಮದಲ್ಲಿ ಎಸ್ ಬಿಐ ಬ್ಯಾಂಕ್ ನ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು.
PublicNext
18/09/2021 08:33 pm