ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ತಾಯಿಯ ಅಂತ್ಯಸಂಸ್ಕಾರ ಮುಗಿಸಿ ಆತ್ಮಹತ್ಯೆಗೆ ಶರಣಾದ ಪುತ್ರ.!

ಮೈಸೂರು: ತಾಯಿಯ ಅಗಲಿಕೆಯ ನೋವು ತಾಳಲಾರದೆ ಮಗನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಗೆ ಶರಣಾದ ಮನಕಲಕುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಿರಿಯಾಪಟ್ಟಣದ ಬಿಎಸ್ಎನ್ಎಲ್ ನಿವೃತ್ತ ನೌಕರ ಪುಟ್ಟಸ್ವಾಮಿ ಅವರ ಪುತ್ರ ಅರ್ಜುನ್ (29) ಆತ್ಮಹತ್ಯೆಗೆ ಶರಣಾದ ಯುವಕ. ಅರ್ಜುನ್ ತಾಯಿ ಸುಜಾತಾ ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತಾಯಿಯ ಅಂತ್ಯ ಸಂಸ್ಕಾರದ ವೇಳೆ, 'ಈ ದಿನ ನನ್ನ ಕೊನೆಯ ದಿನ, ಎಲ್ಲರೂ ನನ್ನ ಮುಖ ನೋಡಿಕೊಂಡು ಬಿಡಿ, ನಾನು ಬದುಕಿರುವುದಿಲ್ಲ' ಎಂದು ಅರ್ಜುನ್ ಗೋಳಾಡಿದ್ದ.

ಅಂತ್ಯಸಂಸ್ಕಾರ ಮುಗಿಸಿ ಅರ್ಜುನ್ ಮನೆಗೆ ಬಾರದೆ ನಾಪತ್ತೆಯಾಗಿದ್ದ. ಸಂಬಂಧಿಕರು ಮತ್ತು ಸ್ನೇಹಿತರು ಹುಡುಕಾಟ ನಡೆಸಿದಾಗ ಕೆರೆಯ ಬಳಿ ಆತನ ಮೊಬೈಲ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಅರ್ಜುನ್ ಶವ ಮೇಲೆತ್ತಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

16/09/2021 10:44 pm

Cinque Terre

120.91 K

Cinque Terre

4

ಸಂಬಂಧಿತ ಸುದ್ದಿ