ಭೋಪಾಲ್: ಬೀದಿನಾಯಿ ರಕ್ಷಣೆಗೆ ಯತ್ನಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾಗಿ ಐವರು ಸಾವನ್ನಪ್ಪಿದ, ಇಬ್ಬರು ಗಾಯಗೊಂಡ ಭೀಕರ ಘಟನೆ ಮಧ್ಯಪ್ರದೇಶದ ರಾಜಘಡ್ದಲ್ಲಿ ನಡೆದಿದೆ.
ಪಾರ್ವತಿಭಾಯ್ (60), ಸಂತ್ರಾ ಬಾಯ್ (45), ಮೋಹರ್ ಸಿಂಗ್(50), ಪ್ರಭುಲಾಲ್ (45) ಹಾಗೂ ಪನ್ನಾಲಾಲ್ ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 52ರ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶನ್ಗಢ್ದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದಾಗ ಆಟೋ ಎದುರು ಏಕಾಏಕಿ ಬೀದಿನಾಯಿ ಅಡ್ಡ ಬಂದಿದೆ. ಈ ವೇಳೆ ಚಾಲಕ ನಾಯಿಯನ್ನು ರಕ್ಷಣೆಗೆ ಯತ್ನಿಸಿದ್ದಾನೆ. ಪರಿಣಾಮ ರಿಕ್ಷಾ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ರಿಕ್ಷಾ ಮೇಲೆ ಹರಿದು ಹೋದ ಪರಿಣಾಮ ಸಾವು ನೋವು ಸಂಭವಿಸಿದೆ.
PublicNext
16/09/2021 08:03 pm