ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್​ನಲ್ಲಿ ಮತ್ತೊಂದು ದುಷ್ಕೃತ್ಯ: ಅಪ್ರಾಪ್ತೆ ಮೇಲೆ ರೇಪ್ ಆರೋಪ.!

ಹೈದರಾಬಾದ್‌: ನಗರದಲ್ಲಿ ನಡೆದ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಹತ್ಯೆ ತೆಲಂಗಾಣವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಆರೋಪಿಯ ಎನ್‌ಕೌಂಟರ್‌ಗೆ ದೇಶಾದ್ಯಂತ ಆಗ್ರಹ ಕೇಳಿಬಂದಿತ್ತು. ಈ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ದುಷ್ಕೃತ್ಯ ಬೆಳಕಿಗೆ ಬಂದಿದೆ.

ಹೈದರಾಬಾದ್‌ನ ಮಂಗಳತ್​ ಪೊಲೀಸ್ ಠಾಣಾ ವ್ಯಾಪ್ತಿಯ ಮಾಂಗಾರು ಬಸ್ತಿಯಲ್ಲಿ ಬಾಲಕಿ ಮೇಲೆ ಸುಮಿತ್ ಎಂಬಾತ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಎಸಿಪಿ ನರೇಂದರ್ ರೆಡ್ಡಿ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೇವಲ ಎರಡು ವಾರಗಳ ಅವಧಿಯಲ್ಲಿ ಇಂಥ ಎರಡು ದುಷ್ಕೃತ್ಯಗಳು ವರದಿಯಾಗಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

Edited By : Vijay Kumar
PublicNext

PublicNext

16/09/2021 03:05 pm

Cinque Terre

47.93 K

Cinque Terre

1

ಸಂಬಂಧಿತ ಸುದ್ದಿ