ನವದೆಹಲಿ: 2020ರಲ್ಲಿ ದೇಶಾದ್ಯಂತ ನಡೆದ ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿದೆ. ಕೊಲೆ ಪ್ರಕರಣಗಳಲ್ಲಿ ಉತ್ತರ ಪ್ರದೇಶ ದೇಶಕ್ಕೆ ಮೊದಲನೇ ಸ್ಥಾನದಲ್ಲಿದೆ. ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ಮೊದಲ ಸ್ಥಾನ ಪಡೆದಿದೆ.
2020ರಲ್ಲಿ ಭಾರತದಲ್ಲಿ ಪ್ರತಿದಿನ ಸರಾಸರಿ 80 ಕೊಲೆಗಳು, 77 ಅತ್ಯಾಚಾರಗಳು ನಡೆದಿವೆ ಎಂಬುದು ಈ ವರದಿಯಿಂದ ಬಹಿರಂಗವಾಗಿದೆ.
2020ರಲ್ಲಿ ಒಟ್ಟು 29,193 ಜನರ ಕೊಲೆಯಾಗಿದ್ದು, , ರಾಜ್ಯಗಳ ಪೈಕಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ ಎಂದು ಬುಧವಾರ ಹೊರಡಿಸಲಾದ ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿಆರ್ ಬಿ) ದತ್ತಾಂಶತಿಳಿಸಿದೆ. ಉತ್ತರ ಪ್ರದೇಶದಲ್ಲಿ 3,779 ಹತ್ಯೆಗಳು, ಬಿಹಾರದಲ್ಲಿ 3,150, ಮಹಾರಾಷ್ಟ್ರದಲ್ಲಿ 2,163 ಹತ್ಯೆಗಳು, ಮಧ್ಯಪ್ರದೇಶ 2,101 ಮತ್ತು ಪಶ್ಚಿಮ ಬಂಗಾಳದಲ್ಲಿ 1ಮ948 ಕೊಲೆಗಳು ನಡೆದಿವೆ. 2019 ರಲ್ಲಿ ಸರಾಸರಿ ಪ್ರತಿದಿನ 79 ಕೊಲೆಗಳಾಗಿದ್ದು, ಒಟ್ಟು 28,915 ಕೊಲೆಯಾಗಿವೆ.
2020 ರಲ್ಲಿ ದೇಶದಲ್ಲಿ ಪ್ರತಿದಿನ ಸರಾಸರಿ 77 ಅತ್ಯಾಚಾರ ನಡೆದಿದ್ದು, ಒಟ್ಟು 28,046 ರೇಪ್ ಕೇಸ್ ದಾಖಲಾಗಿವೆ.
PublicNext
16/09/2021 08:24 am