ತಿರುವನಂತಪುರಂ: ಇಂದಿನ ದಿನಗಳಲ್ಲಿ ಯುವ ಪೀಳಿಗೆ ಸಣ್ಣ-ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆ ಹಾದಿ ಹಿಡಿಯುತ್ತಿದೆ. ಹೀಗೆ ಚಿನ್ನದ ಪದಕ ವಿಜೇತ ಸಂಶೋಧನಾ ವಿದ್ಯಾರ್ಥಿನಿಯ ದುಡುಕಿನ ನಿರ್ಧಾರಕ್ಕೆ ಕೇರಳದ ಕೊಳ್ಳೆಂಗೋಡಿನ ಪಯ್ಯಲ್ಲೂರು ಮೊಕ್ಕುದಲ್ಲಿರುವ ಕುಟುಂಬವು ಆಘಾತಕ್ಕೆ ಒಳಗಾಗಿದೆ.
ಕೃಷ್ಣಕುಮಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಭಾನುವಾರ ರಾತ್ರಿ ಕೃಷ್ಣಕುಮಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಂದೆ ಕೃಷ್ಣಕುಟ್ಟಿ ಯೋಧರಾಗಿದ್ದು, ಕೃಷ್ಣಕುಮಾರಿಗೆ ಮೂವರು ಸಹೋದರಿಯರಿದ್ದಾರೆ. ಎಲ್ಲರೂ ಕೂಡ ಗುಜರಾತ್ ಮತ್ತು ಇತರೆ ಉತ್ತರ ಭಾರತದ ರಾಜ್ಯಗಳಲ್ಲಿ ತಮ್ಮ ವಿದ್ಯಾಭ್ಯಾಸಗಳನ್ನು ಪೂರ್ಣಗೊಳಿಸಿದ್ದಾರೆ.
ಕೃಷ್ಣಕುಮಾರಿ ಗುಜರಾತಿನ ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಮತ್ತು ಎಂಟೆಕ್ ಅನ್ನು ಹೆಚ್ಚಿನ ಅಂಕಗಳೊಂದಿಗೆ ಪೂರ್ಣಗೊಳಿಸಿದ್ದರು. ಗಮನಾರ್ಹ ಸಾಧನೆಗೆ ಸ್ಫೂರ್ತಿ ಪ್ರಶಸ್ತಿ, ಫೆಲೋಶಿಪ್ ಮತ್ತು ಚಿನ್ನದ ಪದಕವನ್ನು ಪಡೆದಿದ್ದರು. 2020ರಲ್ಲಿ ಭಾರತದ ವಿಜ್ಞಾನ ಸಚಿವಾಲಯವು ಸ್ಥಾಪಿಸಿದ ಅತ್ಯುತ್ತಮ ವಿಜ್ಞಾನ ಪತ್ರಿಕೆಗಾಗಿ ಕೃಷ್ಣಕುಮಾರಿ ಅವ್ಸರ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.
ಸದ್ಯ ಕೊಯಮತ್ತೂರಿನ ಕಾಲೇಜಿನಲ್ಲಿ ಕೃಷ್ಣ ಕುಮಾರಿ ಪಿಎಚ್ಡಿ ಮಾಡುತ್ತಿದ್ದರು. ಆದರೆ ಸಂಶೋಧನಾ ಮಾರ್ಗದರ್ಶಕರು ಹಾಗೂ ತನ್ನ ಸುತ್ತಮುತ್ತಲಿನ ಜನರು ತನ್ನನ್ನು ಹುರಿದುಂಬಿಸುತ್ತಿಲ್ಲ ಮತ್ತು ಅಸಡ್ಡೆ ಭಾವನೆ ಹೊಂದಿದ್ದಾರೆಂಬ ನೋವಿನಿಂದ ಕೃಷ್ಣಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
PublicNext
14/09/2021 10:26 pm