ಶಿವಮೊಗ್ಗ: ಕುಡಿದು ಬಂದ ಮಗ, ತಂದೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಪರಿಣಾಮ ಮಗ ತಂದೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ತಂದೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕಿನ ಮಂಡೇನಕೊಪ್ಪದಲ್ಲಿ ಈ ಘಟನೆ ನಡೆದಿದೆ.
ಕೊಲೆಯಾದವರನ್ನು ಕುಮಾರನಾಯ್ಕ (55) ಎಂದು ಗುರುತಿಸಲಾಗಿದೆ. ಪುತ್ರ ಮಧು (28) ಎಂಬಾತನೇ ಕೊಲೆಗೈದ ಆರೋಪಿ.
ದೊಣ್ಣೆಯಿಂದ ಹೊಡೆದ ರಭಸಕ್ಕೆ ಕುಮಾರನಾಯ್ಕನ ಕಿವಿಯಲ್ಲಿ ರಕ್ತಸ್ರಾವ ಆಗಿತ್ತು. ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಕುಮಾರನಾಯ್ಕನಿಗೆ ಇದು ಗೊತ್ತಾಗಿರಲಿಲ್ಲ. ಗಲಾಟೆಯಾದ ನಂತರ ಕುಮಾರನಾಯ್ಕ ಮನೆಯಿಂದ ಹೊರಗೆ ಹೋಗಿದ್ದಾನೆ. ತಡರಾತ್ರಿ ಮನೆಗೆ ವಾಪಸ್ಸಾಗಿ ಮನೆಯ ಜಗುಲಿ ಮೇಲೆ ಮಲಗಿದ್ದಾನೆ. ಕುಮಾರ ನಾಯ್ಕ ಅವರ ಪುತ್ರಿ ಈ ಬಗ್ಗೆ ತುಂಗಾನಗರ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿ ಮಧುನನ್ನು ವಶಕ್ಕೆ ಪಡೆದಿದ್ದಾರೆ.
PublicNext
14/09/2021 08:52 am