ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನಸೌಧದಲ್ಲಿ ಬೀರ್ ಬಾಟಲ್: ಶಕ್ತಿಸೌಧದಲ್ಲೇ ಕುಡಿದ ಕುಡುಕ ಯಾರು?

ಬೆಂಗಳೂರು: ವಿಧಾನಸೌಧದ ಎರಡನೇ ಮಹಡಿಯಲ್ಲಿ ಬೀರ್ ಬಾಟಲ್ ಪತ್ತೆಯಾಗಿದೆ. ಇದರ ಫೋಟೋ ವೈರಲ್ ಆಗ್ತಾ ಇದ್ದಂತೆ ಗಾಬರಿಯಾದ ಅಲ್ಲಿನ ಸಿಬ್ಬಂದಿ ಬೀರ್ ಬಾಟಲ್‌ಗಳನ್ನು ಅಲ್ಲಿಂದ ತೆಗೆದು ಸ್ಥಳ ಸ್ವಚ್ಛಗೊಳಿಸಿದ್ದಾರೆ. ಎರಡನೇ ಮಹಡಿಯ 208ನೇ ಕೊಠಡಿ‌ ಬಳಿ ಈ ಬೀರ್ ಬಾಟಲ್‌ಗಳನ್ನು ಇರಿಸಲಾಗಿತ್ತು.

ಶಕ್ತಿ‌ಸೌಧದಲ್ಲಿ‌ ಮದ್ಯಪಾನ ಮಾಡಿದ್ದು‌ ಯಾರು? ಕುಡಿದ‌ ಬಾಟಲ್ ಬಿಟ್ಟು ಹೋಗಿರುವ ಕುಡುಕರು ಯಾರು? ಎಂಬ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಸ್ಪೀಕರ್ ಕಚೇರಿಯಿಂದ ತನಿಖೆಗೆ ಸೂಚನೆ ನೀಡುವ ಸಾಧ್ಯತೆ ಇದೆ. ವಿಧಾನಸೌಧ ಪೋಲಿಸರು ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.

Edited By : Nagaraj Tulugeri
PublicNext

PublicNext

13/09/2021 01:27 pm

Cinque Terre

45.5 K

Cinque Terre

9