ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹೊರವಲಯದಲ್ಲಿ ನಾಲ್ಕೈದು ಜನರ ಗುಂಪು ಯುವತಿಯೊಬ್ಬಳನ್ನ ವಿವಸ್ತ್ರಗೊಳಿಸಿ ಪೈಶಾಚಿಕ ಹಲ್ಲೆ ನಡೆಸಿ ಅಂಗಾಂಗ ಮುಟ್ಟಿ ವಿಕೃತ ಮೆರೆದಿದ್ದಾರೆ.
ಯಾದಗಿರಿ - ಶಹಾಪುರ ಮಾರ್ಗ ಮಧ್ಯೆ ಕಗ್ಗತ್ತಲಲ್ಲಿ ಮಹಿಳೆಯನ್ನ ಸಂಪೂರ್ಣ ಬೆತ್ತಲಾಗಿಸಿ ನಾಲ್ಕೈದು ಜನರ ಗುಂಪು ಮನಬಂದಂತೆ ಥಳಿಸಿದ್ದಾರೆ.ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅಲ್ಲದೇ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಡಿದ್ದಾರೆ ಎಂದು ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಅವರು ಮಾಹಿತಿ ನೀಡಿದ್ದು, ಮುಂದಿನ ತನಿಖೆಗಾಗಿ ಈಗಾಗಲೇ ಮೂರು ತಂಡಗಳು ರಚಿಸಿಲಾಗಿದೆ ಎಂದಿದ್ದಾರೆ.
ಇನ್ನು ಆರೋಪಿಗಳಾದ ನಿಂಗರಾಜ್ ಹಳೇಪೇಟೆ, ಭೀಮಾಶಂಕರ ಮಮದಾಪುರ್, ಶರಣು ಮಮದಾಪುರ್, ಅಯ್ಯಪ್ಪ ಗಂಗಾನಗರ ಇವರನ್ನ ಪೊಲೀಸರು ಬಂಧಿಸಿದ್ದಾರೆ.
ಶಹಾಪುರ ತಾಲೂಕಿನ ರಸ್ತಾಪುರ ಕ್ರಾಸ್ ಕಮನ್ ಎದುರುಗಡೆ ಕನ್ಯಾಕೋಳೂರು ರಸ್ತೆಯ ನಿರ್ಜನ ಪ್ರದೇಶದಲ್ಲಿ ಮಹಿಳೆಯನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಚಿತ್ರಹಿಂಸೆಗೈದ ಆರೋಪವಿದ್ದು, ವಿಡಿಯೋದಲ್ಲಿ ಮಹಿಳೆ ಶಹಾಪುರ ತಾಲೂಕಿನ ಚಟ್ನಳ್ಳಿ ಹಾಗೂ ಹಳಿಸಾಗರ ಗ್ರಾಮಕ್ಕೆ ಹೋಗ್ತೇನೆ ಅಂತಾ ಹೇಳಿದ್ದಾಳೆ. ಈ ಬಗ್ಗೆ ಯುವತಿ ಠಾಣೆಗೆ ದೂರು ನೀಡಿಲ್ಲ. ಕೃತ್ಯಕ್ಕೆ ಸಂಭಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ್ದಾರೆ.
ಇನ್ನು ಮಹಿಳೆಯಿಂದ ಒಂದು ಮೊಬೈಲ್, 5,000 ರೂಪಾಯಿ ಈ ಹಲ್ಲೆಕೋರರು ಕಿತ್ತುಕೊಂಡಿದ್ದಾರೆ ಎನ್ನಲಾಗ್ತಿದೆ.
ಅದೇನೇ ಇರಲಿ ಯುಪಿ ಮಾದರಿಯಲ್ಲಿ ಇಂಥ ಮೃಗಿಯ ಘಟನೆಗಳು ನಡೆಯುತ್ತವೆ ಎಂದು ನಾವು ನೀವೆಲ್ಲಾ ಕಂಡಿದ್ದೇವೆ. ಕೇಳಿದ್ದೇವೆ. ಆದರೆ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಯಲ್ಲಿ ಮಹಿಳೆಗೆ ನಗ್ನಗೊಳಿಸಿ ಪೈಶಾಚಿಕವಾಗಿ ಹಲ್ಲೆ ನಡೆಸಿದ್ದು, ಮಾತ್ರ ಜನರನ್ನ ಬೆಚ್ಚಿ ಬೀಳಿಸಿದೆ.
------
ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
13/09/2021 12:23 pm