ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋನ್‌ಪೇ ಮೂಲಕ ಲಂಚ ಪಡೆದ ಆರೋಪ: ಪಿಎಸ್ಐ ಸಸ್ಪೆಂಡ್

ತುಮಕೂರು: ಜಿಲ್ಲೆಯ ಗುಬ್ಬಿ ಟೌನ್ ಠಾಣೆಯ ಪಿಎಸ್ಐ ಜ್ಞಾನಮೂರ್ತಿ ಅವರು ಫೋನ್‌ಪೇ ಮೂಲಕ ಲಂಚ ಸ್ವೀಕರಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಅವರನ್ನು ಗಣೇಶೋತ್ಸವದಂದೇ ಅಮಾನತುಗೊಳಿಸಲಾಗಿದೆ.

ಜಿಲ್ಲೆಯ ಗುಬ್ಬಿ ಟೌನ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿಯನ್ನು ಅಮಾನತುಗೊಳಿಸಿ ತುಮಕೂರು ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ. ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ವೊಂದನ್ನು ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಪಿಎಸ್‍ಐ ಹೊತ್ತಿದ್ದರು. ಕ್ಯಾಬ್ ಚಾಲಕನಿಂದ ಫೋನ್ ಪೇ ಮೂಲಕ ಪಿಎಸ್ಐ 7 ಸಾವಿರ ರೂ. ಲಂಚವನ್ನು ಪಡೆದುಕೊಂಡಿದ್ದರು. ಜೀಪ್ ಚಾಲಕ ಕರಿಯಪ್ಪರ ಮೊಬೈಲ್ ನಂಬರಿಗೆ ಪಿಎಸ್‍ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

10/09/2021 07:55 pm

Cinque Terre

92.55 K

Cinque Terre

18

ಸಂಬಂಧಿತ ಸುದ್ದಿ